ರೋಣಾಪುರ ಎನ್ನುವ ಒಂದು ಊರು. ಅಲ್ಲಿ ನಡೆಯುವ ಹಿಂಸೆ, ಅವ್ಯವಹಾರ, ಕೊಲೆ ಎಲ್ಲವನ್ನು ತಡೆಯಲು ಅಲ್ಲಿಗೆ ಮಫ್ತಿ ಪೊಲೀಸ್ ಆಗಿರುವ ಗಣ (ಶ್ರೀಮುರಳಿ) ಬರುತ್ತಾನೆ. ಈ ರೀತಿ ಚಿತ್ರದ ಕಥೆ ಶುರುವಾಗುತ್ತದೆ. ಆ ಊರಿನಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ಅಲ್ಲಿನ ಗ್ಯಾಂಗ್ ಸ್ಟರ್ ಭೈರತಿ ರಣಗಲ್ಲು (ಶಿವರಾಜ್ ಕುಮಾರ್) ಕಾರಣ ಎಂದು ಆತನನ್ನು ಹಿಡಿಯಲು ಗಣ (ಶ್ರೀ ಮುರಳಿ)ನನ್ನು ಪೊಲೀಸ್ ಅಧಿಕಾರಿಗಳು ಕಳುಹಿಸುತ್ತಾರೆ.
ಬೈರತಿ ರಣಗಲ್ಲು (ಶಿವರಾಜ್ ಕುಮಾರ್) ಗ್ಯಾಂಗ್ ಸೇರುವ ಗಣ (ಶ್ರೀಮುರಳಿ) ಅವರ ಜೊತೆ ಇದ್ದೇ ಅವರ ಎಲ್ಲ ಮಾಹಿತಿಯನ್ನು ಪೊಲೀಸ್ ಗೆ ಮುಟ್ಟಿಸುತ್ತಿರುತ್ತಾನೆ. ಹೀಗೆ ಇರುವಾಗ ಭೈರತಿ ರಣಗಲ್ಲುವಿನ ಒಳ್ಳೆಯ ಗುಣ.. ಆತನ ಒಳ್ಳೆಯ ಕೆಲಸ.. ಗಣನಿಗೆ ಅರ್ಥವಾಗುತ್ತದೆ. ಬಳಿಕ ಭೈರತಿ ರಣಗಲ್ಲು ಒಳ್ಳೆಯವನೋ..? ಕೆಟ್ಟವನ್ನೋ..? ಎನ್ನುವ ದ್ವಂದ್ವ ಗಣನಿಗೆ ಮೂಡುತ್ತದೆ. ಕೊನೆಗೆ ಗ್ಯಾಂಗ್ ಸ್ಟರ್ ಭೈರತಿ ರಣಗಲ್ಲುವಿಗೆ ಮಫ್ತಿ ಪೊಲೀಸ್ ಗಣ ಶಿಕ್ಷೆ ಆಗುವಂತೆ ಮಾಡುತ್ತಾನಾ.. ಇಲ್ವಾ.. ಎನ್ನುವುದು ಚಿತ್ರದ ಕಥೆ.