ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಜಯಮಾಲಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ರಾಮಕುಮಾರ್, ಪ್ರಕಾಶ್ ರಾಜ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.ಕೇವಲ ಹೋರಾಟವಲ್ಲದೇ, ಒಬ್ಬ ಸೈನಿಕನ ಕೌಟುಂಬಿಕ ಜೀವನದ ಮೇಲೆ ಕೂಡ ಚಿತ್ರ ಬೆಳಕು ಚೆಲ್ಲಿತು.ಈ ಚಿತ್ರದ ಸಂದರ್ಭದಲ್ಲಿ ಹೆಲಿಕಾಪ್ಟರ್ ನಿಂದ ಜಿಗಿಯುವಾಗ ವಿಷ್ಣುವರ್ಧನ್ ರವರಿಗೆ ಆಘಾತವಾಗಿತ್ತು.
ಕೊಡಗಿನ ವೀರ ಸೈನಿಕ ಅಚ್ಚಪ್ಪನ ಸಾಹಸ ಶೌರ್ಯ ಮತ್ತು ಅವನ ಸುಂದರ ದಾಂಪತ್ಯದೊಂದಿಗೆ ಯುದ್ಧ ಹೇಗೆ ಅವನ ಕುಟುಂಬವನ್ನು ನಾಶ ಮಾಡುತ್ತದೆ ಎಂದು ಚಿತ್ರದಲ್ಲಿ ತೋರಿಸಲಾಗಿದೆ. ಯುಧ್ಧದ ಇನ್ನೊಂದು ಮುಖವನ್ನು ತೆರೆದಿಟ್ಟ ಈ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆಯಿತು.