ಹೆಚ್ ಬಿ ಸುಧೀಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ನಮ್ಮ ಹುಡುಗರು ಚಿತ್ರದಲ್ಲಿ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸಿದ್ದಾರೆ. ಕೆ.ಕೆ. ಆಶ್ರಫ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ದೀಪು ಎಸ್ ಕುಮಾರ್ ಸಂಕಲನ ಮತ್ತು ಅಭಿಮಾನ್ ರಾಯ್ ಸಂಗೀತವಿದೆ. ನಿರಂಜನ್ ಗೆ ವಶಿಷ್ಠ ಸಿಂಹ ಸಾಥ್ ನೀಡಿದ್ದಾರೆ. ರಾಧ್ಯ ನಾಯಕಿಯಾಗಿ ನಟಿಸಿದ್ದಾರೆ.
ಕಥೆ
ವಿನಯ್, ಗುಬ್ಬು ಮತ್ತು ಮಹಾಂತೇಶ್ ಪ್ರಾಣ ಸ್ನೇಹಿತರು. ಆದರೆ ಒಂದು ಸುಳ್ಳು ಅವರ ಗೆಳೆತನಕ್ಕೆ ಸವಾಲು ಹಾಕುತ್ತದೆ. ಈ ಸುಳ್ಳಿನ ಸುಳಿಯಿಂದ ಅವರು ಹೊರ ಬರುತ್ತಾರಾ ಅಥವಾ ಅದಕ್ಕೆ ಅವರ ಸ್ನೇಹ ಬಲಿಯಾಗುತ್ತದಾ ಎಂಬುದು ಚಿತ್ರದ ಕಥೆ.