ನೈಟ್ ಔಟ್ (2019)(U/A)
ನೈಟ್ ಔಟ್ ಕಥೆ
ನಟ ರಾಕೇಶ್ ಅಡಿಗ ನಿರ್ದೇಶಿಸಿರುವ `ನೈಟ್ ಔಟ್' ಥ್ರಿಲ್ಲರ್ ಚಿತ್ರದಲ್ಲಿ ಭರತ್ ,ಶೃತಿ ಗೋರಾಡಿಯಾ ಮತ್ತು ಅಕ್ಷಯ್ ಪವಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನವೀನ್ ಕಷ್ಣ ಮತ್ತು ಲಕ್ಷ್ಮಿ ನವೀನ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಸಮೀರ್ ಕುಲಕರ್ಣಿ ಸಂಗೀತ ನೀಡಿದ್ದಾರೆ.ಇಬ್ಬರು ಪ್ರಾಣ ಸ್ನೇಹಿತರು ರಾತ್ರಿ ಆಟೋ ಪ್ರಯಾಣ ಕೈಗೊಂಡು ಲೋಕಾಭಿರಾಮವಾಗಿ ಮಾತನಾಡುತ್ತಾ ಹೊರಟಿರುವಾಗ ನೆಡೆಯುವ ಕೆಲವು ಅನೀರಿಕ್ಷೀತ ಘಟನೆಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆ.
ಗೋಪಿ ಮತ್ತು ಅಕ್ಷಯ್ ಇಬ್ಬರಯ ಪ್ರಾಣ ಸ್ನೇಹಿತರು. ಅಕ್ಷಯ್ ಕಾಲೇಜು ವಿಧ್ಯಾರ್ಥಿಯಾದರೆ, ಗೋಪಿ ಅಟೋ ಓಡಿಸಿಕೊಂಡು ಇರುತ್ತಾನೆ. ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳದೇ, ಯಾವಾಗಲೂ ತಮಾಷೆ ಮಾಡುತ್ತಾ ಕಾಲ ಕಳೆಯುತ್ತಿರುತ್ತಾರೆ. ಒಂದು ದಿನ ಗೋಪಿ ಅಕ್ಷಯ್ ನನ್ನು ಅಟೋದಲ್ಲಿ ಕಾಲೇಜಿಗೆ ಡ್ರಾಪ್ ಮಾಡಲು ಹೋದಾಗ ಅಕ್ಷಯ್ ಸಹಪಾಠಿ ಶೃತಿ ನೋಡಿ ಪ್ರೀತಿಯಲ್ಲಿ ಬೀಳುತ್ತಾನೆ. ಹಲವು ನಾಟಕ ಮಾಡಿ ಕೊನೆಗೆ ಶೃತಿಯ ಪ್ರೇಮ ಪಡೆಯಲು ಯಶಸ್ವಿಯಾಗುತ್ತಾನೆ.
ಕೆಲ ದಿನಗಳ ನಂತರ ಗೋಪಿಯ ಬಗೆಗಿನ ನಿಜ ತಿಳಿದ ಶೃತಿ ಗೋಪಿಗೆ ತನ್ನ ಪ್ರೇಮದ ನಿಷ್ಠೆಯನ್ನು ಸಾಬೀತು ಪಡಿಸಲು ಹೇಳುತ್ತಾಳೆ.ಈ ಪರೀಕ್ಷೆಯಲ್ಲಿ ಗೋಪಿ ಯಶಸ್ವಿಯಾಗುತ್ತಾನಾ ಎಂಬುದು ಚಿತ್ರದ ಕಥೆ.