ನಿಮ್ದೆ ಕಥೆ ಸಿನಿಮಾವನ್ನು ರಾಘವೇಂದ್ರ ರಾಜ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಲವ್ ಮಾಕ್ಟೇಲ್ ಖ್ಯಾತಿ ಅಭಿಲಾಷ್ ಶೆಟ್ಟಿ ನಾಯಕನಾಗಿ ಹಾಗೂ ರಾಶಿಕಾ ಶೆಟ್ಟಿ ನಾಯಕಿಯಾಗಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಿಹಿ ಕಹಿ ಚಂದ್ರು, ಕಾಮಿಡಿ ಕಿಲಾಡಿಯ ಕೋಳಿ ಕಳ್ಳ ಮನೋಹರ್ ಗೌಡ, ಕೆ ವಿ ಮಂಜಯ್ಯ, ಜ್ಯೋತಿ ಮರೂರ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಪ್ರವೀಣ್ ನಿಕೇತನ್ ಸಂಗೀತ, ಪ್ರಶಾಂತ್ ಸಾಗರ್ ಛಾಯಾಗ್ರಹಣ ಹಾಗೂ ಸುನಿಲ್ ಎಸ್ ಸಂಕಲನ ಸಿನಿಮಾಗಿದೆ. ಶ್ರೀನಿವಾಸ ರೆಡ್ಡಿ ಮತ್ತು ಅರವಿಂದ್ ಯು ಎಸ್ ನಿಮ್ದೆ ಕಥೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ನಿಮ್ದೆ ಕಥೆ ಸಿನಿಮಾ 2025ರ ಏಪ್ರಿಲ್ 4ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.