twitter

    ಓಲ್ಡ್ ಮಾಂಕ್ ಕಥೆ

    ಎಂ.ಜಿ. ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಓಲ್ಡ್ ಮಾಂಕ್ ಚಿತ್ರಕ್ಕೆ ಪ್ರದೀಪ್ ಶರ್ಮಾ ಬಂಡವಾಳ ಹೂಡಿದ್ದಾರೆ. ಸೌರಭ್ ವೈಭವ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ ಮಾಡಲಿರುವ ಈ ಚಿತ್ರಕ್ಕೆ ಭರತ್ ಪರಶುರಾಮ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಅದಿತಿ ಪ್ರಭುದೇವ್ ನಾಯಕಿಯಾಗಿ ನಟಿಸಿದ್ದಾರೆ.

    ಕಥೆಚಿತ್ರದ ಕಥೆ ಆರಂಭವಾಗೋದೆ ದೇವ ಲೋಕದಲ್ಲಿ. ಕೃಷ್ಣನ ಅವರಾತದಲ್ಲಿ ನಟ ಸುನಿಲ್ ರಾವ್, ರುಕ್ಮಿಣಿ ಪಾತ್ರದಲ್ಲಿ ಮೇಘಶ್ರೀ ಹಾಗೂ ನಾರದನಾಗಿ ಶ್ರೀನಿ ಪ್ರತ್ಯಕ್ಷವಾಗುತ್ತಾರೆ. ರುಕ್ಮಿಣಿಯ ಹುಟ್ಟಿದ ದಿನ ಕೃಷ್ಣ ವಿಷ್ ಮಾಡಿರೋದಿಲ್ಲ. ಆದರೇ ನಾರದರು ಮಾತ್ರ ರುಕ್ಮಿಣಿಗೆ ಇಷ್ಟವಾಗುವ ಕೇಕ್ ತಂದು ವಿಷ್ ಮಾಡುತ್ತಾರೆ. ಇದು ಕೃಷ್ಣ ಮತ್ತು ರುಕ್ಮಿಣಿ ನಡುವಿನ ಸಂಬಂಧ ಹಾಳಾಗೋದಕ್ಕೆ ಕಾರಣವಾಗುತ್ತೆ.

     

     

    ನಾರದನಿಗೆ ಪ್ರೀತಿಯ ನೋವು ಎಷ್ಟಿರುತ್ತೆ ಎಂಬುದನ್ನು ಅರ್ಥ ಮಾಡಿಸಲು ಕೃಷ್ಣ ನಾರದನಿಗೆ ಒಂದು ಶಾಪ ನೀಡುತ್ತಾನೆ. ಅದುವೇ ಭೂ ಲೋಕಕ್ಕೆ ಹೋಗಿ ಒಂದು ಹುಡುಗಿಯನ್ನು ಲವ್ ಮಾಡಿ ಮದುವೆ ಆದರೆ ಮಾತ್ರ ನಿನಗೆ ದೇವಲೋಕ ಎಂಟ್ರಿ ಎಂದು. ಅಲ್ಲಿಂದ ಭೂಲೋಕಕ್ಕೆ ಬರುವ ಶ್ರೀನಿ ಹೇಗೆಲ್ಲಾ ಲೈಫ್ ಆರಂಭಿಸುತ್ತಾನೆ, ಮಿಡಲ್ ಕ್ಲಾಸ್‌ನಲ್ಲಿ ಹುಟ್ಟುವ ಶ್ರೀನಿಗೆ ಎದುರಾಗೊ ಸವಾಲುಗಳೇನು, ಅದನ್ನು ಆತ ಹೇಗೆಲ್ಲಾ ನಿಭಾಯಿಸುತ್ತಾನೆ, ಅದಿತಿ ಪ್ರಭುದೇವ ಅವರನ್ನು ಪ್ರೀತಿಸುವ ಶ್ರೀನಿ ಮದುವೆ ಆಗುತ್ತಾನಾ, ಮದುವೆಗೆ ಎದುರಾಗೋ ಸವಾಲುಗಳೇನು ಎಂಬುದು ಚಿತ್ರದ ಕಥೆ.

    **Note:Hey! Would you like to share the story of the movie ಓಲ್ಡ್ ಮಾಂಕ್ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X