ಸಂತೋಷಕುಮಾರ್ ಬೇಟಗೇರಿ ನಿರ್ದೇಶಿಸಿ ನಿರ್ಮಸಿರುವ ರೋಮ್ಯಾಂಟಿಕ್ ಕಾಮಿಡಿ ಚಿತ್ರ `ಒಂಬತ್ತನೇ ಅದ್ಭುತ' ದಲ್ಲಿ ಸಂತೋಷ್ ರವರೇ ನಾಯಕನಾಗಿ ನಟಿಸಿದ್ದಾರೆ. ಇನ್ನುಳಿದಂತೆ ನಾಯಕಿ ನಯನಾ ಸಾಯಿ, ಸೆಂಚುರಿ ಗೌಡ, ರಘು ಪೆಂಡೇಶ್ವರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.ಸುನಿಲ್ ಕೋಶಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಮಂಡ್ಯದ ಹಳ್ಳಿಯೊಂದರಲ್ಲಿ ಮೂರು ವಿಚಿತ್ರ ಘಟನೆಗಳು ನೆಡೆಯುತ್ರವೆ. ಒಬ್ಬ ಪ್ರೌಢಶಾಲಾ ವಿಧ್ಯಾರ್ಥಿನಿಯನ್ನು ಯಾರೋ ರೇಪ್ ಮಾಡಿ ಕೊಲೆ ಮಾಡಿರುತ್ತಾರೆ. ಅದೇ ಸಮಯದಲ್ಲಿ ಹಿರೋ ಆಗಬೇಕೆಂದು ಸಿಟಿಗೆ ಹೋದ ಯುವಕ ವಾಪಸ್ಸು ಬರುತ್ತಾನೆ. ಅದೇ ಊರಿನ ಒಬ್ಬ ಶ್ರೀಮಂತ ಜಮೀನ್ದಾರ ಸಾಯುತ್ತಾನೆ ಹಾಗೂ ಜಮೀನ್ದಾರನ ಮಕ್ಕಳು ತಂದೆಯ ಆಸ್ತಿಗಾಗಿ ಹೊಡೆದಾಡಲು ಆರಂಭಿಸುತ್ತಾರೆ. ಒಂದಕ್ಕೊಂದು ಸಂಬಂಧವಿಲ್ಲದ ಈ ಮೂರು ಘಟನೆಗಳು ಹೇಗೆ ಸಂಬಂಧಿತವಾಗಿವೆ ಎಂಬುದು ಚಿತ್ರದ ಕಥೆ.