ಒಂಟಿ ಬಂಟಿ ಲವ್ ಸ್ಟೋರಿ ಸಿನಿಮಾವನ್ನು ಯತೀಶ್ ಪನ್ನಸಮುದ್ರ ನಿರ್ದೇಶಿಸಿ, ನಟಿಸಿದ್ದಾರೆ. ಚಿತ್ರದಲ್ಲಿ ವೈಭವ್ ವರ್ಧನ್ ಹಾಗೂ ಯತೀಶ್ ಪನ್ನಸಮುದ್ರ ನಾಯಕರಾಗಿ ಅಭಿನಯಿಸಿದ್ದು, ಶ್ವೇತಾ ಭಟ್ ಕಾರವಾರ್ ಮತ್ತು ಶೃತಿ ಚಂದ್ರಶೇಖರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಾಜು ಸಿರಿಗೆರೆ, ರಾಘವೇಂದ್ರ ಹೆಬ್ರಿ, ಅಭಿಷೇಕ್ ನಾರಾಯಣ್ ಶೆಟ್ಟಿ, ಶ್ರೀಪರ್ಣ ಶೆಟ್ಟಿ ತಾರಾಗಣದಲ್ಲಿದ್ದಾರೆ. ಶ್ರೀಹರಿ ಶಾಸ್ತ್ರಿ ಸಂಗೀತ ಹಾಗೂ ಶಿವರಾಜ್ ರಾಥೋಡ್ ಛಾಯಾಗ್ರಹಣ ಸಿನಿಮಾಗಿದೆ. ನಿರ್ದೇಶಕ ಯತೀಶ್ ಪನ್ನಸಮುದ್ರ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.