ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬಂದ ಪಲ್ಲವಿ ಅನುಪಲ್ಲವಿ ಚಿತ್ರದಲ್ಲಿ ಬಾಲವುಡ್ ನಟ ಅನಿಲ್ ಕಪೂರ್ ನಾಯಕನಾಗಿ ನಟಿಸಿದರೆ, ಲಕ್ಷ್ಮಿ ನಾಯಕಿಯಾಗಿ ನಟಿಸಿದರು. ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದರೆ, ಬಾಲು ಮಹೇಂದ್ರನ್ ಛಾಯಾಗ್ರಹಣ ನೀಡಿದರು.
ಒಬ್ಬ ಯುವಕ ತನಗಿಂತ ಹಿರಿಯಳಾದ ಒಬ್ಬ ಡೈವೋರ್ಸ್ ಆದ ಹೆಣ್ಣಿನ ಮೋಹದಲ್ಲಿ ಬೀಳುತ್ತಾನೆ. ತನ್ನನ್ನು ಪ್ರೀತಿಸಿ ಮದುವೆ ಕನಸು ಕಾಣುತ್ತಿರುವ ತನ್ನ ವಯಸ್ಸಿನ ಹುಡುಗಿ ಒಂದೆಡೆಯಾದರೆ, ತನ್ನನ್ನು ಆಕರ್ಷಿಸಿರುವ ಹಿರಿಯ ಮಹಿಳೆ ಇನ್ನೊಂದೆಡೆ. ಈ ಮಾನಸಿಕ ತುಮುಲದಲ್ಲಿ ಪ್ರೀತಿ ಮತ್ತು ಆಕರ್ಷಣೆಯ ಅರ್ಥ ಅರಿಯಲೆತ್ನಿಸುವ ನಾಯಕನಾಗಿ ಅನಿಲ್ ಕಪೂರ್ ಗಮನ ಸೆಳೆಯುತ್ತಾರೆ.