X
ಪಂಚತಂತ್ರ
Comedy | 29 Mar 2019 | U/A |
Kannada

ಪಂಚತಂತ್ರ ಕಥೆ

ಚಿತ್ರದಲ್ಲಿ ನಾಯಕ ಕಾರ್ತೀಕ್ (ವಿಹಾನ ಗೌಡ) ಅನಾಥ, ತನ್ನ ಮೂವರು ಗೆಳಯರೊಂದಿಗೆ ಸೇರಿ ಒಂದು ಗ್ಯಾರೇಜ್ ನೋಡಿಕೊಳ್ಳುತ್ತಿರುತ್ತಾನೆ. ಈ ಗ್ಯಾರೇಜ್ ಅಪ್ಪಯ್ಯ ಬಾಂಡ್‌ಗೆ (ದೀಪಕ್ ಶೆಟ್ಟಿ) ಸೇರಿರುತ್ತದೆ. ಬಾಂಡ್‌ಗೆ ಕಾರ್ ರೇಸ್ ಹುಚ್ಚು.ಇದೇ ಏರಿಯಾದಲ್ಲಿ ವಾಸಿಸುವ ರಂಗಪ್ಪ (ರಂಗಾಯಣ ರಘು) ರಿಯಲ್‌ ಎಸ್ಟೇಟ್ ಉದ್ಯಮ ಮಾಡುತ್ತಾ ಏರಿಯಾದಲಿ ಒಂದು ಕಾಂಪ್ಲೆಕ್ಸ್ ಹೊಂದಿರುತ್ತಾನೆ. ರಂಗಪ್ಪ ಮತ್ತು ಬಾಂಡ್ ಮಧ್ಯೆ ಒಂದು ಕಾನೂನು ಸಮರ ನೆಡೆಯುತ್ತಿರುತ್ತದೆ.

ಇದೆಲ್ಲದರ ಅರಿವಿರದ ರಂಗಪ್ಪನ ಮಗಳು ಸಾಹಿತ್ಯ (ಸೋನಲ್) ಕಾರ್ತೀಕ್ ಪ್ರೀತಿಯಲ್ಲಿ ಬೀಳುತ್ತಾಳೆ. ಇದರಿಂದ ಕಾರ್ತೀಕ್ ಮತ್ತು ರಂಗಪ್ಪ ಮಧ್ಯೆ ಒಂದು ಹೊಸ ತರದ ಘರ್ಷಣೆ ಶುರುವಾಗುತ್ತದೆ.ಈ ಪ್ರೀತಿಯನ್ನು ರಂಗಪ್ಪ ಒಪ್ಪಕೊಳ್ಳುತ್ತಾನಾ? ರಂಗಪ್ಪ ಮತ್ತು ಬಾಂಡ್ ತಮ್ಮ ಮಧ್ಯದ ವೈಷಮ್ಯ ಮರೆತು ಕಾರ್ತೀಕ್ ಮತ್ತು ಸಾಹಿತ್ಯ ಪ್ರೀತಿಗೆ ಒಪ್ಪಿಗೆ ನೀಡುತ್ತಾರಾ? ಕಾರ್ತಿಕ್ ತನ್ನ ಪ್ರೀತಿ ಉಳಿಸಿಕೊಳ್ಳಲು ಹಿಡಿಯುವ ಮಾರ್ಗವೇನು ಎಂದು ಚಿತ್ರ ವಿವರಿಸುತ್ತದೆ. 

ಪಂಚತಂತ್ರದ ಆಮೆ ಮೊಲದ ಕಥೆಗೆ ಸಿನಿಮಾ ರೂಪ ನೀಡಿದ್ದಾರೆ. ಒಂದು ಜಾಗಕ್ಕಾಗಿ ಮುದುಕರು ಮತ್ತು ಹುಡುಗರ ನಡುವೆ ನಡೆಯುವ ರೋಚಕ ಕದನವೇ ಸಿನಿಮಾದ ಕಥೆ. ಈ ಕದನ ಕಾರ್ ರೇಸ್ ರೂಪದಲ್ಲಿದೆ.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+