ಪ್ರಾಪ್ತಿ ಸಿನಿಮಾವನ್ನು ಡಾ. ಎಸ್ ಮಹೇಶ್ ಬಾಬು ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಜಯಸೂರ್ಯ ಆನೇಕಲ್ ಹಾಗೂ ಗೌರಿ ಸಾಗರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ನಿಕಿತಾ ಗೌಡ, ಮೋನಿಷಾ ಥಾಮಸ್, ಕಳಸ ಮಂಜುನಾಥ್, ಮಂಜುಳಾ ರೆಡ್ಡಿ, ನಿಹಾರಿಕಾ ಮುಂತಾದವರು ತಾರಾಗಣದಲ್ಲಿದ್ದಾರೆ. ವಿವಾಹೇತರ ಸಂಬಂಧ, ವಿಚ್ಛೇದನ, ಮಾನಸಿಕ ಖಿನ್ನತೆ ರೀತಿಯ ವಿಷಯಗಳ ಸುತ್ತಾ ಚಿತ್ರದ ಕಥೆ ಸುತ್ತುತ್ತದೆ.