ಅರ್ಜುನ್ ಗೌಡ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಪ್ರಿಯಾಂಕಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಶಂಕರ ನಿರ್ದೇಶನ ಈ ಚಿತ್ರಕ್ಕೆ ರಾಮು ಬಂಡವಾಳ ಹೂಡಿದ್ದಾರೆ. ಆಗಸ್ಟ್ 2, 2019 ರಂದು ಚಿತ್ರದ ಟೀಸರ್ ಬಿಡುಗಡೆಯಾಯಿತು.ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣವಿದ್ದರೆ, ಧರ್ಮ ವಿಶ್ ಸಂಗೀತ ನೀಡಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ಮೂರು ಭಿನ್ನ ಗೆಟೆಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೋಟಿ ರಾಮು ನಿರ್ಮಾಣದ ಕೊನೆಯ ಚಿತ್ರವಾಗಿದೆ.
ಸಾರಾಂಶ
ಚಿತ್ರದ ಆರಂಭದಲ್ಲಿಯೇ ನಾಯಕ ಒಬ್ಬ ಮಹಿಳೆಯನ್ನು ಶೂಟ್ ಮಾಡುತ್ತಾನೆ. ಆ ಮಹಿಳೆ ಬೇರಾರು ಅಲ್ಲ, ಅದು ಅವನ ತಾಯಿಯೇ. ಅರ್ಜುನ ಗೌಡ ತನ್ನ ತಾಯಿಯನ್ನೇ ಕೊಲ್ಲುವ ಸಂದರ್ಭ ಏಕೆ ಸೃಷ್ಟಿಯಾಯಿತು ಎನ್ನುವುದು ಚಿತ್ತದ ಕಥೆ.
ಕಥೆ
ಅರ್ಜುನ ಗೌಡ ಒಬ್ಬ ಪ್ರಸಿದ್ಧ ಟಿವಿ ಚಾನೆಲ್ ಮಾಲೀಕರ ಮಗ. ಭವಿಷ್ಯದ ಕನಸು ಕಾಣುತ್ತಾ ಪ್ರೀತಿಯ ಅಲೆಯಲ್ಲಿ ತೇಲುತ್ತಿರುವ ಅರ್ಜುನ ಗೌಡ ಜೀವನದಲ್ಲಿ ಬಿರುಗಾಳಿ ಏಳುತ್ತದೆ. ರಾಬರ್ಟ್ ಎಂಬ ಭೂಗತ ಪಾತಕಿಯ ಜೊತೆ ಅರ್ಜುನ್ ತಾಯಿಯ ಸಂಘರ್ಷ ಆರಂಭವಾಗುತ್ತದೆ. ಹಾಗೇ ಅರ್ಜುನ್ ಪ್ರೇಯಸಿಯು ಕೂಡ ಕಿಡ್ನಾಪ್ ಆಗುತ್ತಾಳೆ. ಆಗ ಅವನು ಸಮಾಜ ಘಾತಕ ಶಕ್ತಿಗಳ ಜೊತೆಗೆ ಹೋರಾಡಲು ಆರಂಭಿಸುತ್ತಾನೆ. ಇದೇ ಸಂದರ್ಭದಲ್ಲಿ ಅವನು ತನ್ನ ತಾಯಿಯನ್ನು ಕೂಡ ಕೊಲ್ಲಬೇಕಾದ ಪರಿಸ್ತಿತಿ ಬರುತ್ತದೆ.