ಎಂ ಆನಂದ್ ರಾಜ್ ನಿರ್ದೇಶನದ 'ರಾಘು' ಸಿನಿಮಾ ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿರುವ ಏಕವ್ಯಕ್ತಿ ಸಿನಿಮಾ. ಈ ಸಿನಿಮಾದಲ್ಲಿ ಆರಂಭದಿಂದ ಅಂತ್ಯದವರೆಗೂ ಕಾಣಿಸುವುದು ವಿಜಯ್ ರಾಘವೇಂದ್ರ ಮಾತ್ರ. 'ರಾಘು' ಸಿನಿಮಾ ಮೂಲಕ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ತಮ್ಮ ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಡಿಕೆಎಸ್ ಸ್ಟುಡಿಯೋ, ಕೋಟಾ ಫಿಲಂ ಪ್ಯಾಕ್ಟರಿ ಪ್ರೊಡಕ್ಷನ್ ಅಡಿ ಈ ಚಿತ್ರವನ್ನು ರನ್ವಿತ್ ಶಿವಕುಮಾರ್ ಹಾಗೂ ಅಭಿಷೇಕ್ ಕೋಟಾ ನಿರ್ಮಾಣ ಮಾಡಿದ್ದಾರೆ. ಸಿನಿಮಾಗೆ ಉದಯ್ ಲೀಲಾ ಛಾಯಾಗ್ರಹಣವಿದ್ದು, ಸೂರಜ್ ಜೋಯಿಸ್ ಸಂಗೀತ ನಿರ್ದೇಶನವಿದೆ.
ಬಿಡುಗಡೆ: ರಾಘು ಸಿನಿಮಾ 2023ರ ಏಪ್ರಿಲ್ 28ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.