X
ರಾಘವೇಂದ್ರ ಸ್ಟೋರ್ಸ್
Comedy | 28 Apr 2023 | U/A | 104 Mins
Kannada

ರಾಘವೇಂದ್ರ ಸ್ಟೋರ್ಸ್ ಕಥೆ

ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಘವೇಂದ್ರ ಸ್ಟೋರ್ಸ್' ಸಿನಿಮಾದಲ್ಲಿ ನವರಸನಾಯಕ ಜಗ್ಗೇಶ್ ನಾಯಕನಾಗಿ ಅಭಿನಯಿಸಿದ್ದಾರೆ. ಶ್ವೇತಾ ಶ್ರೀವಾಸ್ತವ್ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ರವಿಶಂಕರ್ ಗೌಡ, ದತ್ತಣ್ಣ, ಮಿತ್ರ, ಅಚ್ಯುತ್ ಕುಮಾರ್, ಚಿತ್ಕಲಾ ಬಿರಾದರ್ ಫೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.  ಈ ಚಿತ್ರವನ್ನು ವಿಜಯ್ ಕಿರಗಂದೂರು ಹೊಂಬಾಳೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಇದು ಹೊಂಬಾಳೆ ಪ್ರೊಡಕ್ಷನ್ಸ್‌ನ 12ನೇ ಸಿನಿಮಾ.  

ಬಿಡುಗಡೆ: ರಾಘವೇಂದ್ರ ಸ್ಟೋರ್ಸ್ ಸಿನಿಮಾ 2023ರ ಏಪ್ರಿಲ್ 28ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡಯಾಯಿತು. 

ಕಥೆ: ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಲೇಟ್‌ ಆಗಿ ಮದುವೆ ಆದವರ ಸಮಸ್ಯೆಯೇನು? ಅನ್ನೋದನ್ನು ಹಾಸ್ಯದ ರೂಪದಲ್ಲಿ ತೋರಿಸಲಾಗಿದೆ.  ಚಿತ್ರದಲ್ಲಿ ಜಗ್ಗೇಶ್ 'ಹಯವದನ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಹಯವದನ, ವಯಸ್ಸು 40 ವರ್ಷ. ಇನ್ನು ಮದುವೆ ಆಗಿಲ್ಲ. ಸಿನಿಮಾದ ಆರಂಭದಲ್ಲಿಯೇ ಹಯವದನ ಹೆಣ್ಣು ನೋಡುವುದಕ್ಕೆ ಹೋಗುತ್ತಾನೆ. ಆ ಹುಡುಗಿ ಹಯವದನನ ತಮ್ಮನನ್ನು ಇಷ್ಟಪಟ್ಟು ಮದುವೆ ಆಗುತ್ತಾರೆ. ಇಲ್ಲಿಂದ ಹಯವದನನ ಮದುವೆ ಸರ್ಕಸ್ ಶುರುವಾಗುತ್ತೆ.  ಇನ್ನೊಂದು ಕಡೆ ಶ್ವೇತಾ ಶ್ರೀವತ್ಸವ್ ಮದುವೆ ಕೂಡ ಏನೋ ಒಂದು ಕಾರಣದಿಂದ ನಿಂತು ಹೋಗಿರುತ್ತೆ. ಇವರದ್ದು ಹೆಚ್ಚು ಕಡಿಮೆ ಇದೇ ಪರಿಸ್ಥಿತಿ. ಹಲವು ಸರ್ಕಸ್‌ಗಳ ಬಳಿಕ ಜಗ್ಗೇಶ್ ಹಾಗೂ ಶ್ವೇತಾ ಶ್ರೀವತ್ಸವ್ ಇಬ್ಬರ ಮದುವೆ ಆಗುತ್ತೆ. ಆಮೇಲೆ ಒಂದಿಷ್ಟು ಸಮಸ್ಯೆಗಳು ಎದುರಾಗುತ್ತೆ. ಸಿನಿಮಾದ ಕೊನೆಯಲ್ಲಿ ತಂದೆ (ದತ್ತಣ್ಣ) ಹಾಗೂ ಮಗ (ಜಗ್ಗೇಶ್) ನಡುವಿನ ಸೀನ್ ಇಡೀ ಸಿನಿಮಾ ಹೈಲೈಟ್. ಊಟನ ಹಾಳು ಮಾಡಬಾರದು. ಕಷ್ಟದಲ್ಲಿ ಇರುವವರಿಗೆ ಹೇಗೆ ಸಹಾಯ ಮಾಡಬೇಕು ಅನ್ನೋ ಸಂದೇಶವಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+