ತೆಲುಗಿನ ವಿ ಸಮುದ್ರ ನಿರ್ದೇಶನದ ರಣಂ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಮತ್ತು ಆ ದಿನಗಳು ಚೇತನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿರು ಜೊತೆ ತಮಿಳು ನಟಿ ವರಲಕ್ಷ್ಮಿ ಶರತಕುಮಾರ್ ಪೋಲಿಸ್ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರಕ್ಕೆ ಕನಕಪುರ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ. ರವಿಕಿರಣ್ ಸಂಗೀತದೊಂದಿಗೆ, ದೀಪು ಎಸ್ ಕುಮಾರ ಸಂಕಲನವಿದೆ. ಕನ್ನಡ ಮಾತ್ರವಲ್ಲದೇ ತೆಲಗುನಲ್ಲೂ ತೆರೆಕಾಣಲಿದೆ.
ದೇಶದ ಅನ್ನದಾತ ರೈತರ ಸಮಸ್ಯೆಗಳು, ಮತ್ತು ಸರ್ಕಾರಗಳ ಧೋರಣೆಗಳಿಂದ ರೈತನಿಗೆ ಆಗುತ್ತಿರುವ ಮೋಸ ಮುಂತಾದ ವಿಷಯಗಳ ಮೇಲೆ ಚಿತ್ರ ಬೆಳಕು ಚೆಲ್ಲಲಿದೆ. ಚಿತ್ರದ ಆಡಿಯೋ ಮತ್ತು ಟ್ರೇಲರ್ ನ್ನು ಶಾಸಕಿ ಸೌಮ್ಯಾ ರೆಡ್ಡಿ ಮತ್ತು ಬಿಬಿಎಂಪಿ ಮಾಜಿ ಮೇಯರ್ ಗಂಗಾಬಿಕೆ ಸಮಾರಂಭವೊಂದರಲ್ಲಿ ಬಿಡುಗಡೆ ಮಾಡಿದರು.