ರಂಗಭೂಮಿಯಲ್ಲಿನ ಮುಖ್ಯ ಕಲಾವಿದೆಯ ಬದುಕಿನ ಕಥೆಯನ್ನು ಹೇಳಿತು. ಭಾರತೀಯ ಚಿತ್ರರಂಗದಲ್ಲಿ ಈಡಿಪಸ್ ಕಾಂಪ್ಲೆಕ್ಸ್ ನ ಮೇಲೆ ಬೆಳಕು ಚೆಲ್ಲಿದ ಚಿತ್ರವಿದು ಎಂದರೂ ತಪ್ಪಾಗಲಾರದು. ನಾಟಕ ರಂಗದಿಂದ ಚಲನಚಿತ್ರಗಳವರೆಗಿನ ರಂಗನಾಯಕಿಯ ಪಯಣ ಮತ್ತು ಅವಳ ಬಾಳಿನಲ್ಲಿ ಬರುವ ನಾಲ್ಕು ವ್ಯಕ್ತಿಗಳ ಕಥೆಯನ್ನು ಚಿತ್ರ ಹೇಳಿತು.