ರಂಗಸಮುದ್ರ ಸಿನಿಮಾವನ್ನು ರಾಜ್‌ಕುಮಾರ್ ಅಸ್ಕಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ರಾಘವೇಂದ್ರ ರಾಜ್‌ಕುಮಾರ್, ಸಂಪತ್ ರಾಜ್, ಉಗ್ರಂ ಮಂಜು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ದೇಸಿ ಮೋಹನ್ ಸಂಗೀತ ಹಾಗೂ ಶ್ರೀಕಾಂತ್ ಗೌಡ ಸಂಕಲನವಿದೆ.
ಹೊಯ್ಸಳ ಕೊಣನೂರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 'ರಂಗ ಸಮುದ್ರ' ಸಿನಿಮಾದಲ್ಲಿ ಸುಮಾರು 5 ಹಾಡುಗಳಿದ್ದು ಕೈಲಾಶ್ ಕೇರ್, ಬಾಹುಬಲಿ ಖ್ಯಾತಿಯ ಎಮ್ ಎಮ್ ಕೀರವಾಣಿ, ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ ಹಾಗು ದೇಸಿ ಮೋಹನ್ ಧ್ವನಿಯಾಗಿದ್ದಾರೆ.ಈ 5 ಗೀತೆಗಳಿಗೂ ವಾಗೀಶ್ ಚನ್ನಗಿರಿ ಸಾಹಿತ್ಯ ಬರೆದಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಮೊದಲು ಈ ಸಿನಿಮಾ ಕಥೆ ಕೇಳಿದ್ದರು. ಜೊತೆಗೆ ಈ ಸಿನಿಮಾದಲ್ಲಿ ಅತಿಥಿ ಪಾತ್ರ (ಜಿಲ್ಲಾಧಿಕಾರಿ) ಮಾಡುವುದಾಗಿಯೂ ಹೇಳಿದ್ದರು. ಆದರೆ, ಅವರ ಅಕಾಲಿಕ ನಿಧನದಿಂದಾಗಿ ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗಿರಲಿಲ್ಲ.