ರತ್ನ ಚಿತ್ರವನ್ನು
ಬಸವರಾಜ್ ಬಳ್ಳಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ
ವರ್ಧನ್ ನಾಯಕನಾಗಿ ಹಾಗೂ
ಹರ್ಷಲ ಹನಿ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ನಾಗೇಂದ್ರ ಅರಸ್, ವಿಜಯ್ ಚೆಂಡೂರ್, ಬಾಲಾ ರಾಜ್ವಾಡಿ, ಸಾರಿಕಾ, ಆನಂದ್ ಅಪ್ಪು ಮುಂತಾದವರಿದ್ದಾರೆ. ಸತೀಶ್ ಬಾಬು ಸಂಗೀತ ಹಾಗೂ ಸತೀಶ್ ಗಂಗಾವತಿ ಛಾಯಾಗ್ರಹಣ ಸಿನಿಮಾಗಿದೆ.
ಈ ಸಿನಿಮಾದಲ್ಲಿ ನಾಯಕಿ ಕರ್ನಾಟಕ ರತ್ನ ಪವರ್ ಸ್ಟಾರ್
ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಯಾಗಿರುತ್ತಾಳೆ ಎಂಬುದು ವಿಶೇಷ. ಅಪ್ಪು ಅಭಿಮಾನಿಯ ಸುತ್ತ ಈ ಕಥೆ ಸಾಗುತ್ತದೆ.
ಬಿಡುಗಡೆ: ರತ್ನ ಸಿನಿಮಾ 2024ರ ಏಪ್ರಿಲ್ 19ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.