ಯುವರಾಜ್ ನಿಖಿಲ್ ಕುಮಾರ್ ನಟಿಸುತ್ತಿರುವ ನಾಲ್ಕನೇ ಚಿತ್ರ ರೈಡರ್ ನ್ನು ವಿಜಯ್ ಕುಮಾರ್ ಕೊಂಡ ನಿರ್ದೇಶಿಸುತ್ತಿದ್ದಾರೆ. ಚಂದ್ರು ಮನೋಹರನ್ ಬಂಡವಾಳ ಹೂಡಿರುವ ಈ ಚಿತ್ರದಲ್ಲಿ ಕಾಶ್ಮೀರಾ ಪರ್ದೇಶಿ ನಾಯಕಿಯಾಗಿ ನಟಿಸುತ್ತಿದ್ದಾರೆ. ದತ್ತಣ್ಣ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತವಿರಲಿದೆ.
ರೈಡರ್' ಚಿತ್ರದ ಆಧಾರ ನಟ ಕಿಟ್ಟಿ ಮತ್ತು ನಟಿ ಚಿನ್ನು. ನಿಖಿಲ್ ಕುಮಾರ್ ಚಿಕ್ಕ ವಯಸ್ಸಿನಲ್ಲಿ ಕಿಟ್ಟಿಯಾಗಿ ನಂತರ ಸೂರ್ಯನಾಗಿ ಕಾಣಿಸಿಕೊಂಡಿದ್ದಾರೆ. ಒಮ್ಮೆ ಕಿಟ್ಟಿ-ಚಿನ್ನು ಒಬ್ಬರನ್ನೊಬ್ಬರು ಹುಡುಕಲು ಶುರುಮಾಡಿದ ಬಳಿಕ, ಸಾಲು ಸಾಲು ಟ್ವಿಸ್ಟ್‌ಗಳು ಬಂದು ಹೋಗುತ್ತವೆ. ಹೀರೋನನ್ನು ಒಬ್ಬ ಸಾಮಾನ್ಯ ಹುಡುಗಂತೆ ತೋರಿಸಿರುವ ಕಾರಣಕ್ಕೆ ಸಾವಿರಾರು ಕೋಟಿ ಬಂಡವಾಳ ಹೂಡಿ ವ್ಯವಹಾರ ಮಾಡಿದ ವಿಲನ್ ಹೀರೋ ಮುಂದೆ ತೊಡೆ ತಟ್ಟಿ ಫೈಟ್ ಮಾಡಲ್ಲ. ಇನ್ನೇನೂ ಹೀರೋ, ವಿಲನ್‌ಗೂ ಮಸ್ತ್ ಫೈಟ್ ನಡೆಯುತ್ತೆ ಎನ್ನುವಷ್ಟರದಲ್ಲಿ ಪರಿಸ್ಥಿತಿ ಬೇರೆ ರೂಪ ಪಡೆದುಕೊಳ್ಳುತ್ತದೆ. ಆ ಟ್ವಿಸ್ಟ್ ಏನು ಎನ್ನುವುದನ್ನು ನೀವು ಚಿತ್ರದಲ್ಲಿ ನೋಡಬೇಕು.