ಧರ್ಮ ಕೀರ್ತಿರಾಜ್ ಅಭಿನಯದ 'ರೋನಿ' ಸಿನಿಮಾವನ್ನು ಕಿರಣ್ ಆರ್ ಕೆ ನಿರ್ದೇಶನ ಮಾಡುತ್ತಿದ್ದಾರೆ. ಬಾಂಬೆ ಮೂಲದ ರುತ್ವಿ ಪಟೇಲ್ ಈ ಚಿತ್ರದ ನಾಯಕಿ. ಉಳಿದಂತೆ ತಿಲಕ್, ಕೀರ್ತಿರಾಜ್, ವರ್ಧನ್, ರಘು ಪಾಂಡೇಶ್ವರ್,ಬಾಲಾ ರಾಜ್ವಾಡಿ, ರತನ್ ಮುಂತಾದವರು ನಟಿಸಿದ್ದಾರೆ. ಮುಂಬೈನಲ್ಲಿ ಡಬ್ಬಿಂಗ್ ಹಕ್ಕುಗಳನ್ನು ಖರೀದಿಸುತ್ತಿದ್ದ ಹಿರಿಯ ಸಿನಿಪಂಡಿತ ಎಂ ರಮೇಶ್ ಹಾಗೂ ಪವನ್ ಕುಮಾರ್ ಮೊದಲ ಬಾರಿಗೆ ಈ ಚಿತ್ರಕ್ಕೆ ಲಕ್ಷ್ಮಿ ಗಣಪತಿ ಸ್ಟುಡಿಯೋಸ್ ಮತ್ತು ರೋಶಿಕಾ ಎಂಟರ್‌ಪ್ರೈಸಸ್ ಮೂಲಕ ಬಂಡವಾಳ ಹೂಡಿದ್ದಾರೆ. ಆಕಾಶ್ ಪರ್ವ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ವೀನಸ್ ನಾಗರಾಜಮೂರ್ತಿ ಛಾಯಾಗ್ರಹಣವಿದೆ.