ರಗಡ್ (2019)(U/A)
ರಗಡ್ ಕಥೆ
ವಿನೋದ್ ರಾಜಕುಮಾರ್ ಮತ್ತು ಚೈತ್ರಾ ರೆಡ್ಡಿ ಮುಖ್ಯಪಾತ್ರಗಳಲ್ಲಿ ನಟಿಸಿರುವ ರಗಡ್ ಚಿತ್ರವನ್ನು ಶ್ರೀ ಮಹೇಶ್ ಗೌಡ ನಿರ್ದೇಶಿಸಿದ್ದಾರೆ. ಅರುಣ ಕುಮಾರ್ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತ ನೀಡಿದ್ದಾರೆ.
ರಗಡ್ ಚಿತ್ರದ ಕಥೆ ಹಾಸನದಲ್ಲಿ ನೆಡೆದ ಒಂದು ಘಟನೆಯಿಂದ ಸ್ಪೂರ್ತಿ ಪಡೆದಿದೆ. ಇಲ್ಲಿ ನಾಯಕ ಶಿವು (ವಿನೋದ ಪ್ರಭಾಕರ್) ತನ್ನ ಜನಾಂಗದೊಂದಿಗೆ ಕಾಡಿನ ಒಂದು ಕೊಪ್ಪಲಿನಲ್ಲಿ ವಾಸಿಸುತ್ತಿರುತ್ತಾನೆ. ಅಲ್ಲಿನ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಬಂದು ಅವರಲ್ಲರೂ ಜಾಗ ಖಾಲಿ ಮಾಡಬೇಕಾಗುತ್ತದೆ. ನಂತರ ಜೀವನೋಪಾಯಕ್ಕಾಗಿ ಗೆಳೆಯರೊಂದಿಗೆ ಸಿಟಿಗೆ ಬರುವ ಶಿವು ಯಾವುದೇ ಉದ್ಯೋಗ ಸಿಗದೇ ವಾಮಮಾರ್ಗದಿಂದ ಹಣ ಗಳಿಸಲು ಆರಂಭಿಸುತ್ತಾನೆ.
ಇದೇ ಸಮಯದಲ್ಲಿ ನಂದಿನಿ(ಚೈತ್ರಾ ರೆಡ್ಡಿ) ಮೇಲೆ ಪ್ರೀತಿ ಹುಟ್ಟುತ್ತದೆ.ಪೋಲಿಸ್‌ರಿಗೆ ಬೇಕಾದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಶಿವು ಮತ್ತು ಇದೆಲ್ಲದರ ಅರಿವಿಲದೇ ಶಿವನನ್ನು ಪ್ರೀತಿಸುವ ನಂದಿನಿ..ಮುಂದೆ ಸತ್ಯ ಗೊತ್ತಾದಾಗ ನಂದಿನಿ ಏನು ಮಾಡುತ್ತಾಳೆ? ನಂದಿನಿಗಾಗಿ ಶಿವು ಬದಲಾಗುತ್ತಾನಾ ಎಂಬುದು ಚಿತ್ರದ ಕಥೆ.