ಸಾರಾ ಅಬೂಬಕ್ಕರ್ `ವಜ್ರಗಳು' ಕಾದಂಬರಿ ಆಧಾರಿತ `ವಜ್ರ ಸಾಧ್ಯ' ಚಿತ್ರವನ್ನು ಆರ್ನಾ ಸಾಧ್ಯ (ಶ್ವೇತಾ ಶೆಟ್ಟಿ) ನಿರ್ದೇಶಿಸಿದ್ದಾರೆ. ಅನು ಪ್ರಭಾಕರ್ ರವರು `ನಫೀಸಾ' ಎಂಬ ಮುಸ್ಲಿಂ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಂ ದೇವೇಂದ್ರ ರೆಡ್ಡಿ ರವರು ಸಂಭ್ರಮ ಡ್ರೀಮ್ ಹೌಸ್ ಭ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಿಸಿದ್ದು , ವಿ ಮನೋಹರ್ ಸಂಗೀತ ನೀಡಿದ್ದಾರೆ.
ಸಾರಾ ಅಬೂಬಕ್ಕರ ರವರು ಬಿಯರಿ ಮುಸ್ಮಿಂ ಸಮುದಾಯದ ಹೆಣ್ಣು ಮಗಳ ಕಥೆಯನ್ನು ಹೆಣದಿದ್ದಾರೆ. ತಾನು ಯಾವುದೇ ತಪ್ಪು ಮಾಡದೇ ಇದ್ದರೂ ತಲಾಖ್ ಸುಳೀಯಲಿ ಸಿಲುಕುವ ನಪೀಸಾ ಮತ್ತು ಅವಳ 16 ರಿಂದ 60 ವರ್ಷದ ಜೀವನವನ್ನು ಚಿತ್ರ ಕಟ್ಟಿಕೊಡುತ್ತದೆ.