ಸಹರಾ ಸಿನಿಮಾವನ್ನು ಮಂಜೇಶ್ ಭಗವತ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಾರಿಕಾ ರಾವ್ ನಾಯಕಿಯಾಗಿ ಹಾಗೂ ಅಂಕುಶ್ ರಜತ್ ನಾಯಕನಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸುಧಾರಾಣಿ, ಮಂಜುನಾಥ್ ಹೆಗಡೆ, ಕುರಿ ಸುನೀಲ್, ಮಂಜುಳ ರೆಡ್ಡಿ ಮುಂತಾದವರು ತಾರಾಗಣದಲ್ಲಿದ್ದಾರೆ. ಸೂರಜ್ ಜೋಯಿಸ್ ಸಂಗೀತ ಸಿನಿಮಾಗಿದೆ.
ಕನ್ನಡದ ಮೊದಲ ಮಹಿಳಾ ಕ್ರಿಕೆಟ್ ಆಧರಿಸಿದ ಸಹರಾ ಸಿನಿಮಾದ ನಿರೂಪಣೆಯನ್ನು ಕಿಚ್ಚ ಸುದೀಪ್ ಮಾಡಿದ್ದಾರೆ. ಮಂಡ್ಯದಿಂದ ಬಂದ ಯುವತಿಯೊಬ್ಬಳು ಮಹಾನ್ ಕ್ರಿಕೆಟರ್ ಆಗಿ ಬೆಳೆಯೋ ಸ್ಫೂರ್ತಿದಾಯಕ ಕಥೆ ಇದಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 'ಪಿಆರ್‌ಕೆ' ಸಂಸ್ಥೆ ಆಡಿಯೋ ಹಕ್ಕು ಪಡೆದು ಸಿನಿಮಾಗೆ ಸಪೋರ್ಟ್ ಮಾಡಿದೆ.