ವಿ ರವಿಚಂದ್ರನ್ ಕಥೆ ಬರೆದು ನಿರ್ಮಾಣ ನಿರ್ದೇಶನ ಮಾಡಿ ನಾಯಕನಾಗಿ ನಟಿಸಿದ ಚತುರ್ಭಾಷಾ ಚಿತ್ರ ಶಾಂತಿ ಕ್ರಾಂತಿ. ಕನ್ನಡದಲ್ಲಿ ರವಿಚಂದ್ರನ್ ನಾಯಕನಾಗಿ, ತೆಲಗುವಿನಲ್ಲಿ ನಾಗಾರ್ಜುನ ನಾಯಕನಾಗಿ, ಹಿಂದಿ ಮತ್ತು ತಮಿಳುವಿನಲ್ಲಿ ರಜಿನಿಕಾಂತ್ ನಾಯಕನಾಗಿ ನಟಿಸಿದರು. ಒಂಭತ್ತು ಗೀತೆಗಳಿದ್ದ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದರು.
ಅನಂತನಾಗ್ ಖಳನಾಯಕನಾಗಿ ನಟಿಸಿದರೆ, ಜೂಹಿ ಚಾವ್ಲಾ ನಾಯಕಿಯಾಗಿ ನಟಿಸಿದರು. ರಮೇಶ್ ಅರವಿಂದ್ ಮತ್ತು ಖುಷ್ಬೂ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದರು. ತುಂಬಾ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದ ಈ ಚಿತ್ರ ಬಾಕ್ಸಾಫೀಸಿನಲ್ಲಿ ನೆಲ ಕಚ್ಚಿತು. ಚಿತ್ರದ ತಾಂತ್ರಿಕತೆಗೆ ರವಿಚಂದ್ರನ್ ಪ್ರಶಸ್ತಿ ಪಡೆದರು.