ನಟಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಶೀಲ ಸಿನಿಮಾವನ್ನು ಬಾಲು ನಾರಾಯಣನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಾಗಿಣಿ, ಅವಿನಾಶ್, ಶೋಭರಾಜ್, ಚಿತ್ರಾ ಶಣೈ, ಮಹೇಶ್ ನಾಯರ್, ಶ್ರೀಪತಿ, ರಿಯಾಜ್ ಖಾನ್, ಅಬೆ ಡೇವಿಡ್, ಆರತಿ ಗೋಪಾಲ ಮುಂತಾದವರು ನಟಿಸಿದ್ದಾರೆ. ಈ ಚಿತ್ರ ಕನ್ನಡ ಹಾಗೂ ಮಲಯಾಳಂ ಎರಡು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಪ್ರಸ್ತುತ ಹೆಣ್ಣುಮಕ್ಕಳು ದಿನನಿತ್ಯ ಸಮಜದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳ ಸುತ್ತ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ.