ಶೋಷಿತೆ ಸಿನಿಮಾವನ್ನು ಶಶಿಧರ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಿರೂಪಕಿ ಜಾನ್ವಿ ರಾಯಲ್ ಹಾಗೂ ಕೆಜಿಎಫ್ ಖ್ಯಾತಿಯ ರೂಪ ರಾಯಪ್ಪ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ದರ್ಶನ್ ವೆಂಕಟೇಶ್, ಪ್ರಶಾಂತ್ ಕುಮಾರ್ ರಾಮಸ್ವಾಮಿ, ಸಿಕಂದರ್ ಶೈಕ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ರವಿವರ್ಮಕುಮಾರ್ ಛಾಯಾಗ್ರಹಣ ಹಾಗೂ ಕೆವಿನ್ ಎಂ ಸಂಗೀತವಿದೆ.
ಬಿಡುಗಡೆ: ಶೋಷಿತೆ ಸಿನಿಮಾ 2023ರ ಡಿಸೆಂಬರ್ 1ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.