ಸಿಂಗ (2019)(U/A)
ಸಿಂಗ ಕಥೆ
ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸುತ್ತಿರುವ `ಸಿಂಗ' ಚಿತ್ರವು ಸಾಹಸ ಪ್ರಧಾನ ಪ್ರೇಮಚಿತ್ರವಾಗಿದ್ದು ಆದಿತಿ ಪ್ರಭುದೇವ ನಾಯಕಿಯಾಗಿ ನಟಿಸುತ್ತಿದಾರೆ. ವಿಜಯ ಕಿರಣ್ ಚಿತ್ರವನ್ನು ನಿರ್ದೇಶಿಸಿದ್ದರೆ, ಉದಯ್ ಕೆ ಮೆಹತಾ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರದ ಫಸ್ಟ್ ಲುಕ್ ಜನೇವರಿ 11,2019 ರಂದು ಬಿಡುಗಡೆಯಾಗಿತು.ಚಿತ್ರ ಜುಲೈ 19, 2019 ರಂದು ಬಿಡುಗಡೆಯಾಯಿತು.
ತನ್ನದೇ ಆದ ಶೈಲಿಯಲ್ಲಿ ಬದುಕುವ ಸಿಂಗನಿಗೆ ಪ್ರೀತಿ ಮತ್ತು ಮದುವೆಗಳಲ್ಲಿ ನಂಬಿಕೆ ಇರಲ್ಲ. ಸಿಂಗನ ತಾಯಿಗೆ ಮಗನು ಬೇಗ ಮದುವೆಯಾಗಿ ನೆಲೆಗೊಳ್ಳಬೇಕೆಂಬ ಆಸೆ.ಈ ಕೋಪಿಷ್ಟ ಸಿಂಗ ತಾಯಿಯ ಮುದ್ದಿನ ಮಗ.ಈ ಕೋಪದಿಂದ ಪೋಲಿಸ್ ಜೊತೆ ಕೂಡ ತಂಟೆ ಮಾಡಿಕೊಂಡಿರುತ್ತಾನೆ. ಹೀಗೆ ಹಲವು ಪೋಲಿಸ್ ಕೇಸ್ ಗಳ ಇವನ ಮೇಲೆ ಇರುವುದರಿಂದ ಮದುವೆಗೆ ಹಿಂದೆ ಹಾಕುತ್ತಿರುತ್ತಾನೆ. ಯಾರೆ ತನ್ನ ಹತ್ತಿರ ಕಷ್ಟ ಎಂದು ಬಂದರೆ ಹಿಂದು ಮುಂದೆ ನೋಡದೇ ಸಹಾಯ ಮಾಡುತ್ತಿರುತ್ತಾನೆ. ಒಂದು ಸಲ ಒಬ್ಬ ಮಧ್ಯ ವ್ಯಸನಿಯೊಬ್ಬನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಾನೆ . ಆತ ಸಿಂಗನ ಹತ್ತಿರ ಹಣಕ್ಕಾಗಿ ಮೋರೆ ಹೋದಾಗ ಸಿಂಗ ದೇಗುಲದ ಹುಂಡಿಯಿಂದ ಹಣ ಕದ್ದು ಅವನಿಗೆ ನೆರವಾಗುತ್ತಾನೆ. ಇಲ್ಲಿ ಸಿಂಗನ ಪಾಪ ಪುಣ್ಯಗಳ ಹೆದರಿಕೆಯಿಲ್ಲ.
ಒಂದು ದಿನ ಸಿಂಗನ ತಾಯಿ ಜಾನಕಮ್ಮ ದೇವಸ್ಠಾನದಲ್ಲಿ ಗೀತಾಳನ್ನು (ಆದಿತಿ ಪ್ರಭುದೇವ) ನೋಡಿ ತನ್ನ ಮಗನಿಗೆ ಸೂಕ್ತ ಜೋಡಿಯಾಗುತ್ತಾಳೆ ಎಂದು ನಿರ್ಧರಿಸುತ್ತಾಳೆ. ಮೊದಮೊದಲು ಇದಕ್ಕೆ ಹಿಂದೇಟು ಹಾಕುತ್ತಾನೆ. ಆದರೆ ಒಂದು ಸಲ ಸಿಂಗನ ಮೇಲೆ ಅಟ್ಯಾಕ್ ಆದಾಗ ಗೀತಾ ಸಹಾಯ ಮಾಡಿದಾಗ ಅವಳ ಮೇಲೆ ಪ್ರೀತಿ ಹುಟ್ಟುತ್ತದೆ. ಇನ್ನೇನು ಪ್ರೀತಿ ಮತ್ತು ಸರಿಯಾದ ಟ್ರ್ಯಾಕ್ ನಲ್ಲಿ ಹೋಗುತ್ತಿದೆ ಎಂದಾಗ ರುದ್ರಸ್ವಾಮಿ ಸಿಂಗನ ಮೇಲೆ ತನ್ನ ಹಳೆಯ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ. ಏನಿದು ರುದ್ರಸ್ವಾಮಿ ಸೇಡಿನ ಕಥೆ ಎಂಬುದು ಚಿತ್ರದ ಮುಂದಿನ ಕಥೆ.