ಸಿಪಾಯಿ ಚಿತ್ರದಲ್ಲಿ ರವಿಚಂದ್ರನ್, ಚಿರಂಜೀವಿ, ನಾಯಕರಾಗಿ, ಸೌಂದರ್ಯ, ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ತಾರ, ಉಮಾಶ್ರೀ, ವಿನಯ ಪ್ರಸಾದ್, ರಮೇಶ್ ಭಟ್, ಮುಖ್ಯಮಂತ್ರಿ ಚಂದ್ರು, ಬಾಲರಾಜ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.ರವಿಚಂದ್ರನ್ ಅವರ ನಿರ್ದೇಶನದಲ್ಲಿ ಮತ್ತು ಹಂಸಲೇಖ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಈ ಚಿತ್ರ ಇಬ್ಬರ ಸೈನಿಕರ ಸ್ನೇಹವನ್ನು ತೋರಿಸುತ್ತದೆ. ಇದು ತೆಲಗು ನಟ ಚಿರಂಜೀವಿ ನಟಿಸಿದ ಪ್ರಥಮ ಕನ್ನಡ ಚಲನಚಿತ್ರ. ರವಿಚಂದ್ರನ್ ನಟಿಸಿ, ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದರು.