ಶ್ರೀ ಭರತ ಬಾಹುಬಲಿ ಚಿತ್ರವು ರೋಮ್ಯಾಂಟಿಕ್ ಹಾಸ್ಯ ಚಿತ್ರವಾಗಿದ್ದು ಮಂಜು ಮಾಂಡವ್ಯ, ಸಾರಾ ಹರೀಶ್, ಚಿಕ್ಕಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಂಜು ಮಾಂಡವ್ಯ ಚಿತ್ರವನ್ನು ನಿರ್ದೇಶಿಸುತ್ತಿದ್ದರೆ, ಮಣಿಕಂಠ ಕದ್ರಿ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಚಿತ್ರದಲ್ಲಿ ರಿಷಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.ಕಾರ್ತಿಕ್ ಗೌಡರ ಕೆ.ಆರ್.ಜೆ ಸ್ಟುಡಿಯೋ ಮೂಲಕ ಚಿತ್ರವನ್ನು ರಾಜ್ಯಾದಂತ್ಯ ವಿತರಣೆ ಮಾಡಲಿದ್ದಾರೆ.
ಒಂದು ಹಳ್ಳಿ. ಆ ಹಳ್ಳಿಯಲ್ಲಿ ಇಬ್ಬರು ತುಂಡ್ ಹೈಕ್ಳು. ಅವರೇ ಭರತ (ಮಂಜು ಮಾಂಡವ್ಯ) ಮತ್ತು ಬಾಹುಬಲಿ (ಚಿಕ್ಕಣ್ಣ). ಊರಿನ ಜನಕ್ಕೆ ಇಬ್ಬರ ಕಾಟ ತಡೆಯಲು ಆಗುವುದಿಲ್ಲ. ಹೀಗೆ ತರ್ಲೆ, ತಮಾಷೆಯ ನಡುವೆ ಇದ್ದ ಹುಡುಗರು ಕೆಲವು ಕಾರಣಗಳಿಂದ ಜೈಲು ಪಾಲಾಗಬೇಕಾಗುತ್ತದೆ.
ಈ ವೇಳೆಗೆ ವಿದೇಶದಿಂದ ತನ್ನ ಪೂರ್ವ ಜನ್ಮವನ್ನು ಹುಡುಕಿಕೊಂಡು ನಾಯಕಿ ಶ್ರೀ (ಸರಾ ಹರೀಶ್) ಬರುತ್ತಾಳೆ. ರತ ಹಾಗೂ ಬಾಹುಬಲಿ ವಿದೇಶದಿಂದ ಬಂದ ಶ್ರೀಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ಎನ್ನುವುದು ಚಿತ್ರದ ಮುಂದಿನ ಕಥೆಯಾಗಿದೆ.