ಪ್ರವೀಣ್ ತೇಜ್ ,ಸೌರವ ಲೋಕೇಶ್,ಶಿಲ್ಪಾ ಮಂಜುನಾಥ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ `ಸ್ಟ್ರೈಕರ್'. ಪವನ ತ್ರಿವಿಕ್ರಮ ನಿರ್ದೇಶಿಸಿರುವ ಈ ಚಿತ್ರಕ್ಕೆ ಭರತ್ ಬಿ.ಜೆ ಸಂಗೀತ ನೀಡಿದ್ದಾರೆ. ಸಿ.ರಮೇಶ್ ಬಾಬು,ಸಿ ಸುರೇಶ್ ಬಾಬು ಮತ್ತು ಗುಡ್ಡಿಟಿ ಶಂಕರಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದಲ್ಲಿ ನಾಯಕ ಪ್ರವೀಣ್ ತೇಜ್ ಒಂದು ವಿಶಿಷ್ಠ ರೋಗದಿಂದ ಬಳಲುತ್ತಿರುತ್ತಾನೆ. ಕನಸಿನಲ್ಲಿ ಕಂಡ ಘಟನೆಗಳನು ಮತ್ತು ವಾಸ್ತವ ಘಟನೆಗಳಿಗೆ ವ್ಯತ್ಯಾಸ ಗೊತ್ತಿರದ ಸ್ಥಿತಿಯಲ್ಲಿ ನಾಯಕ ಒದ್ದಾಡುತ್ತಾನೆ. ಹೀಗಿರುವಾಗ ಒಂದು ವಿಚಿತ್ರ ಘಟನಾವಳಿಗಳ ನಂತರ ಪೋಲಿಸ್ ಶಂಕೆಗೆ ಒಳಪಡುತ್ತಾನೆ. ಇವನನ್ನು ಬೆನ್ನುತ್ತುವ ಪೋಲಿಸ್ (ಸೌರವ ಲೋಕಿ), ತನ್ನನ್ನೇ ತಾನು ಅರಿಯದ ಸ್ಥಿತಿಯಲ್ಲಿರುವ ನಾಯಕನ ಸಂಘರ್ಷವನ್ನು ಚಿತ್ರ ತೋರಿಸುತ್ತದೆ.