ಸೂತ್ರಧಾರಿ ಸಿನಿಮಾವನ್ನು ಕಿರಣ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಚಂದನ್ ಶೆಟ್ಟಿ ನಾಯಕನಾಗಿ ಹಾಗೂ ಸಂಜನಾ ಆನಂದ್ ನಾಯಕಿ ನಟಿಸಿದ್ದಾರೆ. ಉಳಿದಂತೆ ಅಪೂರ್ವ, ತಬಲ ನಾಣಿ, ಪ್ರಶಾಂತ್ ನಟನಾ, ಸಂಜಯ್ ಗೌಡ, ನವಾಜ್ ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ, ಪಿಕೆಹೆಚ್ ದಾಸ್ ಛಾಯಾಗ್ರಹಣ ಹಾಗೂ ಸತೀಶ್ ಚಂದ್ರಯ್ಯ ಸಂಕಲನವಿದೆ. ಈ ಸಿನಿಮಾವನ್ನು ಈಗಲ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ನವರಸನ್ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ:ಸೂತ್ರಧಾರಿ ಸಿನಿಮಾ 2025ರ ಮೇ 9ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.