ಸುವರ್ಣ ಸುಂದರಿ ಕಥೆ

  ಈ ಚಿತ್ರದ ಕಥೆ ಸುಮಾರು ಮುನ್ನೂರು ವರ್ಷಗಳಷ್ಟೂ ವಿಸ್ತರಿಸಿದೆ. ನಿರ್ದೇಶಕ ಎಂ.ಎಸ್.ಎನ್ ಸೂರ್ಯ ಹೇಳುವಂತೆ ಸುಮಾರು ಆರು ನೂರು ವರ್ಷಗಳ ಹಿಂದೆ ನೆಡೆದಿದೆ ಎನ್ನಲಾದ ಕಥೆಯೊಂದನ್ನು ಆಧಾರವಾಗಿ ಇಟ್ಟುಕೊಂಡು ಈ ಚಿತ್ರವನ್ನು ತಯಾರಿಸಲಾಗಿದೆ.

  ಮಹದೇವ ರೆಡ್ಡಿ ಸಾಮ್ರಾಜ್ಯದಲ್ಲಿ ಸಿಗುವ ಸುವರ್ಣ ಸುಂದರಿ ಗೊಂಬೆ ಸುತ್ತ ಚಿತ್ರದ ಕಥೆ ಸಾಗುತ್ತದೆ. ತನ್ನ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದವರಿಂದ ರಕ್ಷಣೆಗಾಗಿ ರಾಜ ತ್ರಿನೇತ್ರಿ ದೇವಿಯ ವಿಗ್ರಹವನ್ನು ಮಾಡಲು ಆದೇಶಿಸುತ್ತಾನೆ. ಆದರೆ ವಿಗ್ರಹ ಮಾಡುವವನಿಗೆ ``ರಾಜ ತಮ್ಮ ಸಮುದಾಯವನ್ನು ಕೀಳಾಗಿ ಕಾಣುತ್ತಾನೆ; ಇವನಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು'' ತ್ರಿನೇತ್ರಿ ವಿಗ್ರಹದ ಬದಲು ಸಂಹಾರರೂಪಿಣಿ `ರುದ್ರರೂಪಿಣಿ' ವಿಗ್ರಹವನ್ನು ತಯಾರಿಸುತ್ತಾನೆ.

  ಇದನ್ನರಿತ ರಾಜ ಆ ವಿಗ್ರಹ ಮಾಡುವವನನ್ನು ಕೊಲ್ಲುತ್ತಾನೆ. ಆದರೆ ಅಷ್ಟರೊಳಗೆ ಕಾಲ ಮೀರಿಹೋಗಿರುತ್ತದೆ. ಆ ವಿಗ್ರಹದ ಪ್ರಭಾವದಿಂದ ರಾಜನ ಪುತ್ರಿ ತನ್ನವರನೆಲ್ಲಾ ಕೊಲ್ಲುತ್ತಾಳೆ. ನಂತರ ಕಾಲಾನುಕ್ರಮದಲ್ಲಿ ಆ ಗೊಂಬೆ (ವಿಗ್ರಹ) ಯಾರ ಹತ್ತಿರವಿರುತ್ತದೋ ಅವರಿಗೆಲ್ಲ ಸಾವು ಕಟ್ಟಿಟ್ಟ ಬುತ್ತಿಯಾಗಿರುತ್ತದೆ.

  ಮುನ್ನೂರು ವರ್ಷಗಳ ನಂತರ ರಾಜನ ಕಾಲದ ಪಾತ್ರಗಳು ಮರುಹುಟ್ಟು ಪಡೆದುಕೊಳ್ಳುತ್ತವೆ. ಪ್ರಸ್ತುತದಲ್ಲಿ ಆ ವಿಗ್ರಹ ಹೇಗೆಲ್ಲಾ ತೊಂದರೆ ಕೊಡುತ್ತದೆ. ಅದರಲ್ಲಿರುವ ನಕರಾತ್ಮಕ ಶಕ್ತಿಯನ್ನು ಹೇಗೆ ತೆಗೆಯುತ್ತಾರೆ ಎಂಬುದು ಚಿತ್ರದ ಕಥೆ.
  **Note:Hey! Would you like to share the story of the movie ಸುವರ್ಣ ಸುಂದರಿ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X