ವಿಲನ್ ಚಿತ್ರವು ಜೋಗಿ ಪ್ರೇಮ್ ನಿರ್ದೇಶನದ ಬಹತಾರಾಗಣದ ಸಾಹಸ ಪ್ರಧಾನ ಚಿತ್ರವಾಗಿದ್ದು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕರಾಗಿ ಅಭಿನಯಿಸಿದ್ದಾರೆ.ರಾಮ್ (ಸುದೀಪ್) ಚಿಕ್ಕ ವಯಸ್ಸಿನಲ್ಲಿ ತನ್ನ ತಾಯಿಯಿಂದ ದೂರ ಆಗಿರುತ್ತಾನೆ. ಆ ತಾಯಿಯನ್ನು ಮಗನಿಗೆ ಸೇರಿಸುವ ಜವಾಬ್ದಾರಿಯನ್ನು ರಾಮಣ್ಣ (ಶಿವಣ್ಣ) ತೆಗೆದುಕೊಳ್ಳುತ್ತಾನೆ. ಕೊನೆಗೆ ತಾಯಿ ಮಗ ಇಬ್ಬರೂ ಒಂದಾಗುತ್ತಾರ.. ಇಲ್ವಾ? ಎನ್ನುವುದು ಸಿನಿಮಾದ ಒನ್ ಲೈನ್ ಸ್ಟೋರಿ.