ಟೋಬಿ ಸಿನಿಮಾವನ್ನು ಚೊಚ್ಚಲ ಬಾರಿಗೆ ಬಾಸಿಲ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಯುಕ್ತ ಹೊರನಾಡು ಮತ್ತು ಚೈತ್ರಾ ಆಚಾರ್ ಈ ಚಿತ್ರದ ನಾಯಕಿಯರು. ಚಿತ್ರಕ್ಕೆ ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಹಾಗೂ ಮಿಥುನ್ ಮುಕುಂದನ್ ಸಂಗೀತವಿದೆ. 'ಗರುಡ ಗಮನ ವೃಷಭ ವಾಹನ' ಸಿನಿಮಾ ನಿರ್ಮಾಣ ಮಾಡಿದ್ದ ರವಿ ರೈ ಹಾಗೂ ರಾಜ್ ಬಿ ಶೆಟ್ಟಿಯ ಲಾಫಿಂಗ್ ಬುದ್ಧ ಫಿಲಂಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಚಿತ್ರದ ನಾಯಕ ರಾಜ್ ಬಿ ಶೆಟ್ಟಿ ಜೀವನದಲ್ಲಿ ಒಂದಷ್ಟು ಘಟನೆಗಳು ನಡೆದಿವೆ. ಆ ಘಟನೆಗಳೇ ಈ ಸಿನಿಮಾಗೆ ಸ್ಫೂರ್ತಿಯಂತೆ.
ಬಿಗ್ ಬಜೆಟ್: ಸ್ಯಾಂಡಲ್‌ವುಡ್ ಮೂಲಗಳ ಪ್ರಕಾರ, ಟೋಬಿ ಬಜೆಟ್ ಬರೋಬ್ಬರು 15 ಕೋಟಿ ರೂಪಾಯಿ. ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿರುವುದರಿಂದ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆಯಂತೆ. ಟೋಬಿ ಸಿನಿಮಾದ ಶೂಟಿಂಗ್‌ಗಾಗಿ ಜಾತ್ರೆ ಸೆಟ್ ಹಾಕಲಾಗಿತ್ತು. ಆ ಒಂದು ಸೆಟ್ಟಿಗಾಗಿಯೇ ಸುಮಾರು 3 ರಿಂದ 4 ಕೋಟಿ ರೂ. ಖರ್ಚು ಮಾಡಲಾಗಿದೆ ಎನ್ನಲಾಗಿದೆ.
ಬಿಡುಗಡೆ: ಟೋಬಿ ಸಿನಿಮಾ 2023ರ ಆಗಸ್ಟ್ 25ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
'
ಕಥೆ: ಹರಕೆಯ ಕುರಿ ಕಾಣೆಯಾಗಿದೆ ಎಂಬುದರಿಂದ ಸಿನಿಮಾ ಆರಂಭವಾಗುತ್ತದೆ. ಆ ಕಾಣೆಯಾದ ಕುರಿ ವಾಪಸ್ ಬಂದರೆ ಮಾರಿಯಾಗಿರುತ್ತದೆ ಎಂಬುದು ಪೂಜಾರಿ ಹೇಳುವ ಮಾತು. ಅಂದರೆ ಇಲ್ಲಿ ಹರಕೆಯ ಕುರಿ ಯಾರು, ಮೂಗುತಿ ಮಾರಿಯಾಗಲು ಕಾರಣವೇನು ಎಂಬುದೆ ಸಿನಿಮಾ ಕಥೆ. ಹೆಸರಿಲ್ಲದ ಅನಾಥ, ಮೂಕ ವಿಲಕ್ಷಣ ವ್ಯಕ್ತಿಯೊಬ್ಬ ಮತ್ತೊಂದು ಅನಾಥ ಹೆಣ್ಣು ಮಗುವನ್ನು ಸಾಕುವ, ಮನೆ ಕಟ್ಟಲು, ಜೀವನ ಸಾಗಿಸಲು ಉಳ್ಳವರಿಗೆ ಹರಕೆಯ ಕುರಿಯಾಗುವ ಆತನ ಜೀವನದಲ್ಲಿ ನಡೆಯುವ ಘಟನೆಗಳೇ ಟೋಬಿ.
ಒಟಿಟಿ ಬಿಡುಗಡೆ: ಟೋಬಿ ಸಿನಿಮಾ 2023ರ ಡಿಸೆಂಬರ್ 22ಕ್ಕೆ ಸೋನಿಲಿವ್‌ನಲ್ಲಿ ಬಿಡುಗಡೆಯಾಯಿತು.