ಜಗತ್ತೇ ಒಂದು ಮನೆ, ನಾವೆಲ್ಲ ಒಂದೇ ಸೂರಿನಡಿ ಬದುಕುತ್ತಿರುವವರು ಎಂಬ ಭಾವೈಕ್ಯತೆಯ ಸಂದೇಶ ಸಾರಿದ್ದ ತೋತಾಪುರಿ ಸಿನಿಮಾದ ಸೀಕ್ವೆಲ್ ತೋತಾಪುರಿ 2. ಈ ಚಿತ್ರವನ್ನು ವಿಜಯ್ ಪ್ರಸಾದ್ ಅವರೇ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಹಾಗೂ ಮೊದಲ ಭಾಗದ ಅಂತ್ಯದಲ್ಲಿ ಕಾಣಿಸಿಕೊಂಡು ಸ್ಪೆಷಲ್ ಲುಕ್ ನೀಡಿದ್ದ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಉಳಿದಂತೆ ಅದಿತಿ ಪ್ರಭುದೇವ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾದತ್ ಹೀಗೆ ಮೊದಲ ಭಾಗದಲ್ಲಿದ್ದ ಹಲವರು ಈ ಚಿತ್ರದಲ್ಲಿದ್ದಾರೆ. ಶಿವಲಿಂಗ ಖ್ಯಾತಿಯ ಕೆ.ಎ.ಸುರೇಶ್ ತೋತಾಪುರಿ 2 ನಿರ್ಮಿಸುತ್ತಿದ್ದಾರೆ.
ಬಿಡುಗಡೆ: ತೋತಾಪುರಿ 2 ಸೆಪ್ಟಂಬರ್ 28ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿತು.