X
ಯುಐ
Action | 20 Dec 2024 | U/A | 132 Mins
Kannada

ಯುಐ ಕಥೆ

'UI' ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಮೂಲಕ ಉಪ್ಪಿ 2 ಚಿತ್ರದ ನಂತರ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದು, ಉಳಿದಂತೆ ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ, ಗುರುಪ್ರಸಾದ್, ಅಚ್ಯುತ್ ಕುಮಾರ್, ಸಾಧುಕೋಕಿಲ, ರವಿಶಂಕರ್ ಪಿ, ಮುರಳಿ ಶರ್ಮಾ, ಕಾಕ್ರೋಚ್ ಸುಧಿ ಮುಂತಾದವರು ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ 'UI' ಚಿತ್ರಕ್ಕಿದ್ದು, ಜಿ. ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ.

ಯುಐ ಕಥೆ: ಇದು ಸಿನಿಮಾದೊಳಗಿನ ಸಿನಿಮಾ ಕಥೆ. ನಿರ್ದೇಶಕ ಉಪೇಂದ್ರ ನಿರ್ದೇಶನದ 'ನಾಮ'(ಚಿಹ್ನೆ) ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿರುತ್ತದೆ. ಒಮ್ಮೆ ನೋಡಿದರೆ ಯಾರು ಅರ್ಥವಾಗುತ್ತಿಲ್ಲ. ಫೋಕಸ್ ಮಾಡಿದ್ರೆ ಅರ್ಥವಾಗುತ್ತದೆ ಎಂದು ಪ್ರೇಕ್ಷಕರು ಪದೇ ಪದೇ ಸಿನಿಮಾ ನೋಡಲು ಮುಗಿಬೀಳ್ತಾರೆ. ಅರ್ಥ ಆದವರು ವಿಚಿತ್ರವಾಗಿ ಆಡಿದರೆ ಕೆಲವರು ಸಿನಿಮಾ ಬ್ಯಾನ್ ಮಾಡಿ ಎಂದು ಪ್ರತಿಭಟನೆ ನಡೆಸುತ್ತಿರುತ್ತಾರೆ. 

ಈ ಚಿತ್ರಕ್ಕೆ ವಿಮರ್ಶೆ ಬರೆಯಲು ಸಾಧ್ಯವಾಗದೇ ಚಿತ್ರ ವಿಮರ್ಶಕನೊಬ್ಬ ತಲೆ ಕೆಡಿಸಿಕೊಂಡಿರುತ್ತಾನೆ. ಎಷ್ಟೇ ಬಾರಿ ನೋಡಿದರೂ ಆತನಿಗೆ ಸಿನಿಮಾ ಅರ್ಥವಾಗಿರಲ್ಲ. ಆಗ ಈ ಬಗ್ಗೆ ತಿಳಿದುಕೊಳ್ಳಲು ನಿರ್ದೇಶಕ ಉಪೇಂದ್ರರನ್ನು ಹುಡುಕಿ ಹೋಗ್ತಾನೆ. ಅಲ್ಲಿ ಅವರು ಸಿಗಲ್ಲ, ಆದರೆ ಅವರು ಬರೆದು ಸುಟ್ಟು ಹಾಕಲು ಹೋಗಿದ್ದ ಕಥೆಯ ಪ್ರತಿ ಸಿಗುತ್ತದೆ. ಅದನ್ನು ಆ ವಿಮರ್ಶಕ ಓದುತ್ತಾನೆ. ಅಷ್ಟಕ್ಕೂ ಆ 'ನಾಮ'ದ ಕಥೆ ಏನು? ಉಪೇಂದ್ರ ಅದನ್ನು ಸುಟ್ಟು ಹಾಕಲು ಬಯಸಿದ್ದು ಏಕೆ? ಅಷ್ಟು ನೋಡುವ 'ಕಲ್ಕಿ' ಕಥೆಯೇನು? ಎನ್ನುವುದೇ  'ಯುಐ' ಸಿನಿಮಾ.

ಬಿಡುಗಡೆ: ಉಪೇಂದ್ರ ಅವರ ಬಹನಿರೀಕ್ಷಿತ ಯುಐ ಸಿನಿಮಾ 2024ರ ಡಿಸೆಂಬರ್ 20ರಂದು ಬಿಡುಗಡೆ ಆಯಿತು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+