ಕೋಮಲ್ ಅಭಿನಯದ 'ಉಂಡೆನಾಮ' ಸಿನಿಮಾವನ್ನು ಕೆ.ಎಲ್.ರಾಜಶೇಖರ್ ನಿರ್ದೇಶನ ಮಾಡಿದ್ದಾರೆ. ಇದೊಂದು ಹಾಸ್ಯಮಯ ಸಿನಿಮಾವಾಗಿದ್ದು, ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿದೆ. ಕೋಮಲ್ ಜೊತೆ ಹರೀಶ್ ರಾಜ್, ತಬಲಾ ನಾಣಿ, ಧನ್ಯಾ ಬಾಲಕೃಷ್ಣ ಅಭಿನಯಿಸಿದ್ದಾರೆ. ಉಂಡೆನಾಮ ಚಿತ್ರಕ್ಕೆ ವಿ. ಶ್ರೀಧರ್ ಸಂಭ್ರಮ ಸಂಗೀತ ನೀಡಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.
ಬಿಡುಗಡೆ: ಕೋಮಲ್ ನಟನೆಯ 'ಉಂಡೆನಾಮ' ಸಿನಿಮಾ 2023ರ ಏಪ್ರಿಲ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.