ಉಪಾಧ್ಯಕ್ಷ ಸಿನಿಮಾವನ್ನು ಅನಿಲ್ ಕುಮಾರ್ ಟಿ.ಎಂ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಚಿಕ್ಕಣ್ಣ ನಾಯಕನಾಗಿ ಹಾಗೂ ಹಿಟ್ಲರ್ ಕಲ್ಯಾಣ ಸೀರಿಯಲ್ ಖ್ಯಾತಿ ಮಲೈಕಾ ವಸುಪಾಲ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ರವಿಶಂಕರ್ ಪಿ, ಕರಿ ಸುಬ್ಬು, ವೀಣಾ ಸುಂದರ್, ಸಾಧು ಕೋಕಿಲ, ಧರ್ಮಣ್ಣ ಕಡೂರು ಮುಂದಾದವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತ ಮತ್ತು ಶೇಖರ್ ಚಂದ್ರು ಛಾಯಾಗ್ರಹಣವಿದೆ. ಉಮಾಪತಿ ಫಿಲ್ಮ್ ಭ್ಯಾನರ್ ಅಡಿಯಲ್ಲಿ 'ಉಪಾಧ್ಯಕ್ಷ' ಸಿನಿಮಾ ನಿರ್ಮಾಣ ಮಾಡಲಾಗಿದೆ.
ಬಿಡುಗಡೆ: ಉಪಾಧ್ಯಕ್ಷ ಸಿನಿಮಾ 2024ರ ಜನವರಿ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.
ಕಥೆ:ಅಧ್ಯಕ್ಷನಂತೆ ಗೆಜ್ಜೆಪುರದಲ್ಲೇ ಉಪಾಧ್ಯಕ್ಷನ ಕಥೆ ಮುಂದುವರೆಯುತ್ತೆ. ಮಂಡ್ಯ ಜಿಲ್ಲೆಯಲ್ಲಿರುವ ಈ ಹಳ್ಳಿಯಲ್ಲಿ ಇರುವ ಚೀ ತೂ ಸಂಘಕ್ಕೆ ನಾರಾಯಣ [ ಚಿಕ್ಕಣ್ಣ ] ಉಪಾಧ್ಯಕ್ಷ. ಅಧ್ಯಕ್ಷನಾಗುವ ಎಲ್ಲ ಅರ್ಹತೆ ಇದ್ದರೂ, ನಾರಾಯಣನಿಗೆ ಪ್ರಸ್ತುತ ಅಧ್ಯಕ್ಷರ ಮೇಲೆ ವಿಪರೀತವಾದ ಪ್ರೀತಿ. ಈ ಕಾರಣಕ್ಕೆ ಉಪಾಧ್ಯಕ್ಷನಾಗಿಯೇ ಮುಂದುವರೆಯಲು ನಿರ್ಧಾರ ಮಾಡುವ ನಾರಾಯಣನ ಬದುಕು ನಾಯಕಿ ಅಂಜಲಿ [ ಮಲೈಕಾ ವಸುಪಾಲ್ ] ಆಗಮನದ ಬಳಿಕ ಸಂಪೂರ್ಣ ಬದಲಾಗುತ್ತೆ. ಅಲ್ಲಿಂದಾಚೆ ಏನಾಗುತ್ತೆ ಅನ್ನುವುದನ್ನ ಚಿತ್ರದ ಕಥೆ.