ಯೂಸ್‌ಲೆಸ್ ಫೆಲೋ ಸಿನಿಮಾವನ್ನು
ಮನು ಬಸವರಾಜ್ ನಿರ್ದೇಶಿಸಿ, ನಟಿಸಿದ್ದಾರೆ. ಚಿತ್ರದಲ್ಲಿ ಮನುಗೆ ಜೋಡಿಯಾಗಿ ದಿವ್ಯಾ ಗೌಡ ಕಾಣಿಸಿಕೊಂಡಿದ್ದಾರೆ. ವಿಜಯ್ ಸೂರ್ಯ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ವಿನೋದ್ ಗೊಬ್ಬರಗಾಲ, ಜೆಕೆ ಮೈಸೂರು, ಸುರೇಶ್ ತಾರಾಗಣದಲ್ಲಿದ್ದಾರೆ.
ಈ ಚಿತ್ರವನ್ನು ರಾಜರತ್ನ ಪ್ರೊಡಕ್ಷನ್ ಹೌಸ್ ಅಡಿ ಮನು ಅವರ ತಾಯಿ ರತ್ನ ಬಸವರಾಜು ನಿರ್ಮಾಣ ಮಾಡಿದ್ದಾರೆ. ಹರಿವು, ಪಿಂಗಾರ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಿರ್ಮಾಪಕ ಅವಿನಾಶ್ ಶೆಟ್ಟಿ ಕೂಡ ನಿರ್ಮಾಪಕರಾಗಿದ್ದಾರೆ. ಶ್ಯಾಮ್ ಸಿಂಧನೂರು ಛಾಯಾಗ್ರಹಣ, ವಿಜಯ್ ಸಿಂಧಗಿ ಸಂಕಲನ ಹಾಗೂ ಶಿವಪ್ರಸಾದ್ ಸಂಗೀತ ನಿರ್ದೇಶನ ಈ ಸಿನಿಮಾಗಿದೆ.