ಎಸ್ ಮಹೇಂದರ್ ನಿರ್ದೇಶನದಲ್ಲಿ ಮೂಡಿಬಂದ ವಾಲಿ ಚಿತ್ರದಲ್ಲಿ ಸುದೀಪ್ ದ್ವಿಪಾತ್ರದಲ್ಲಿ ನಟಿಸಿದ್ದರು. ತಮಿಳಿನ ವಾಲಿ ಚಿತ್ರದ ರಿಮೇಕ್ ಆದ ಈ ಚಿತ್ರದಲ್ಲಿ ಪೂನಂ ಸಿಂಗರ್ ನಾಯಕಿಯಾಗಿ ಅಭಿನಯಿಸಿದ್ದರು. ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದರು.
ದೇವ ಮತ್ತು ಶಿವ ಎಂಬ ಅವಳಿ ಜವಳಿ ಸಹೋದರರು. ಹಿರಿಯ ದೇವ್ ಮೂಗ ಮತ್ತು ಕಿವುಡನಾದರೂ ಯಶಸ್ವಿ ಉದ್ಯಮಿ. ಶಿವ ಪ್ರಿಯಾಳನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಆದರೆ ದೇವ್ ಕೂಡ ಪ್ರಿಯಾಳನ್ನು ಪ್ರೀತಿಸುತ್ತಿರುತ್ತಾನೆ. ಹೇಗಾದರೂ ಮಾಡಿ ತನ್ನ ತಮ್ಮ ಶಿವನನ್ನು ಪ್ರಿಯಾಳಿಂದ ದೂರವಿಡುವ ದೇವ್ ಮುಂದೆ ಪ್ರಿಯಾಳಿಗಾಗಿ ಶಿವನನ್ನು ಕೊಲ್ಲಲು ಕೂಡ ಹೇಸುವುದಿಲ್ಲ. ಇದರಿಂದ ಶಿವ್ ಮತ್ತು ಪ್ರಿಯಾ ಹೇಗೆ ಪಾರಾಗುತ್ತಾರೆ ಎಂಬುದು ಚಿತ್ರದ ಕಥೆ.