ವಿಕಾಸಪರ್ವ ಸಿನಿಮಾವನ್ನು ಅನ್ಬು ಅರಸ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕನ್ನಡ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ರೋಹಿತ್ ನಾಗೇಶ್ ಹಾಗೂ ಸ್ವಾತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ನಿಶಿತಾ ಗೌಡ, ಅಶ್ವಿನ್ ಹಾಸನ್, ಬಾಲ ರಾಜ್ವಾಡಿ, ಕುರಿ ರಂಗ, ಮಾಸ್ಟರ್ ಅಭಯ್, ಸಮೀರ್ ನಗರದ್ ಮುಂತಾದವರು ತಾರಾಗಣದಲ್ಲಿದ್ದಾರೆ. ಎ ಪಿ ಓ ಸಂಗೀತ ನಿರ್ದೇಶನ, ನವೀನ್ ಸುವರ್ಣ ಛಾಯಾಗ್ರಹಣ ಹಾಗೂ ಶ್ರೀನಿವಾಸ್ ಕಲಾಲ್ ಸಂಕಲನ ಸಿನಿಮಾಗಿದೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ರಾಜ್ಯ ಪ್ರಶಸ್ತಿ ವಿಜೇತ ವಿಶೃತ್ ನಾಯಕ್ ಬರೆದಿದ್ದಾರೆ. ಜೊತೆಗೆ, ಕಾರ್ಯಕಾರಿ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಕಾಸಪರ್ವ ಚಿತ್ರವನ್ನು ಮೈಂಡ್ ಥಾಟ್ಸ್ ಮೀಡಿಯಾ ಲಾಂಛನದಲ್ಲಿ ಸಮೀರ್ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ವಿಕಾಸಪರ್ವ ಸಿನಿಮಾ 2024ರ ಸೆಪ್ಟಂಬರ್ 12ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.