ವಿರಾಟ್ ಒಂದು ಆಕ್ಷನ್ ಸಿನಿಮಾವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚೈತ್ರ ಚಂದ್ರನಾಥ್, ಇಶಾ ಚಾವ್ಲಾ, ವಿದಿಶಾ, ಸೇರಿದಂತೆ ಈ ಚಿತ್ರ ಸ್ಯಾಂಡಲ್ ವುಡ್ ಸ್ಟಾರ್ ಗಳಿಂದ ತುಂಬಿ ತುಳುಕುತ್ತಿದೆ.
ಹಾಸ್ಯ ನಟರೆಂದೇ ಖ್ಯಾತಿ ಪಡೆದ ರಂಗಾಯಣ ರಘು, ಬುಲೆಟ್ ಪ್ರಕಾಶ್, ಶರಣ್ ಮತ್ತು ಇನ್ನೂ ಹಲವಾರು ನಟ-ನಟಿಯರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಎಚ್ ವಾಸು ವಿರಾಟ್ ಚಿತ್ರಕ್ಕೆ ನಿರ್ದೇಶನ ನೀಡಿದ್ದಾರೆ. c ಕಲ್ಯಾಣ್ ನಿರ್ಮಾಪಕರಾಗಿದ್ದಾರೆ. ವಿ ಹರಿಕೃಷ್ಣ ತಮ್ಮ ಸಂಗೀತ ಗಾಯನವನ್ನು ಈ ಸಿನಿಮಾಕ್ಕೆ ನೀಡಿದ್ದಾರೆ.