ಪುನಿಕ್ ಶೆಟ್ಟಿ ಕತೆ ಬರೆದು ನಿರ್ದೇಶಿಸಿರುವ `ವಿರುಪಾ' ಚಿತ್ರ ಮಕ್ಕಳ ಚಿತ್ರವಾಗಿದೆ. ಡ್ಯಾಘ್ನಿ ನೀತು ಡಿಸೋಜ ನಿರ್ಮಿಸಿರುವ ಈ ಚಿತ್ರದ `ಟ್ರೇಲರ್' ನ್ನು ಮಾಸ್ಟರ್ ಆನಂದ್, ಅಂಬಾರಿ ಅರ್ಜುನ್ ಬಿಡುಗಡೆ ಮಾಡಿದರು..ಶಾಹಿಲ್ ಭಟ್ಕಳ, ವಿಷ್ಣು ಹಾಗೂ ಚರಣ್ ಹೀಗೆ ಕರ್ನಾಟಕದ ವಿವಿಧ ಭಾಗಗಳ ಮಕ್ಕಳು ನಟಿಸುವುದರ ಜೊತೆಗೆ ಹೊರದೇಶದ ಕಲಾವಿದರು ನಟಿಸಿದ್ದಾರೆ.ಸಿನಿಮಾವನ್ನು ಹಂಪಿಯಲ್ಲಿ ಚಿತ್ರೀಕರಣ ಮಾಡಲಾಗಿದೆ.
ವಿರುಪಾ ಚಿತ್ರ ಮೂರು ಮುಗ್ಧ ಮಕ್ಕಳ ಸುಂದರ ಕನಸುಗಳ ಚಿತ್ರಣ. ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ವಾಸಿಸುವ ಮೂರು ತುಂಟ ಮಕ್ಕಳಾದ ವಿನ್ಸೆಂಟ್,ರುಸ್ತುಮ್ ಮತ್ತು ಪಾಕ್ಷ (ವಿರುಪಾ) ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಪಾಕ್ಷ ಅಲ್ಲಿ ಬರುವ ಪ್ರವಾಸಿಗರ ಗೈಡ್ ಆಗಲು ಬಯಸಿದರೆ, ಕಿವಿ ಕೇಳಿಸದ ರುಸ್ತುಮ್ ಕಲಾವಿದನಾಗಲು ಬಯಸುತ್ತಾನೆ. ಕುರುಡನಾದ ವಿನ್ಸೆಂಟ್ ಉತ್ತಮ ಗಾಯಕ. ಈ ಮೂರು ಮಕ್ಕಳ ತುಂಟಾಟ ಮತ್ತು ಸುಂದರ ಕನಸುಗಳನ್ನು ಚಿತ್ರ ಕಟ್ಟಿ ಕೊಡುತ್ತದೆ.