»   » 'ಸರ್ಕಸ್ 'ಗಾಗಿ ಗಣೇಶ್ ರ ಮೈನವಿರೇಳಿಸುವ ಸಾಹಸ

'ಸರ್ಕಸ್ 'ಗಾಗಿ ಗಣೇಶ್ ರ ಮೈನವಿರೇಳಿಸುವ ಸಾಹಸ

Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ 'ಸರ್ಕಸ್' ಚಿತ್ರಕ್ಕಾಗಿ ವೇಗವಾಗಿ ಚಲಿಸುತ್ತಿರುವ ರೈಲಿನ ಅಪಾಯಕಾರಿ ಸಾಹಸ ದೃಶ್ಯದವೊಂದರಲ್ಲಿ ನಟಿಸಿ ಧೈರ್ಯ ಸಾಹಸಗಳನ್ನೇ ಮೆರೆದಿದ್ದಾರೆ. ಸಾಹಸ ದೃಶ್ಯಕ್ಕಾಗಿ 10 ಬೋಗಿಗಳ ರೈಲು ಇಂಜಿನನ್ನು ಬಳಸಿಕೊಳ್ಳಲಾಗಿದ್ದು, ಈ ದೃಶ್ಯಗಳನ್ನು ರವಿ ವರ್ಮಾ ನಿರ್ದೇಶಿಸಿದ್ದಾರೆ. ಸುರಂಗವೊಂದರಲ್ಲಿ 50 ಕಿ.ಮೀ ವೇಗದಲ್ಲಿ 150 ಮೀಟರ್ ಗಳಷ್ಟು ದೂರ ರೈಲು ಇಂಜಿನ್ ಸಾಗುವ ದೃಶ್ಯವಿದೆ. ಸುರಂಗದ ಕತ್ತಲ ಪ್ರದೇಶದಲ್ಲಿ ರೈಲ್ ಇಂಜಿನ್ ನಿಲ್ಲಿಸುವ ಪ್ರಯತ್ನ ಮಾಡುವ ಅಪಯಕಾರಿ ದೃಶ್ಯವೊಂದರಲ್ಲಿ ಗಣೇಶ್ ನಟಿಸಿದ್ದಾರೆ.

ನನ್ನ ವೃತ್ತಿ ಜೀವನದಲ್ಲೇ ತೀರಾ ಅಪಯಕಾರಿ ಸಾಹಸ ದೃಶ್ಯ ಇದಾಗಿತ್ತು ಎನ್ನುತ್ತಾರೆ 100ಕ್ಕೂ ಅಧಿಕ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ರವಿ ವರ್ಮಾ. ಹಾಗೆಯೇ ಗಣೇಶ್ ವೇಗವಾಗಿ ಚಲಿಸುತ್ತಿರುವ ರೈಲಿನ ಮೇಲೆ ಒಂದು ಬೋಗಿಯಿಂದ ಮತ್ತೊಂದಕ್ಕೆ ಜಿಗಿಯುವ ದೃಶ್ಯಗಳು ಇವೆ. ಈ ಸಾಹಸ ದೃಶ್ಯಗಳಲ್ಲೂ ಅವರು ಯಶಸ್ವಿಯಾಗಿ ನಟಿಸಿದ್ದಾರೆ. ಇವಿಷ್ಟು ಸಾಹಸಗಳನ್ನು ಮಾಡಿ ಗಣೇಶ್ ಯಾವುದೆ ಅಪಾಯಗಳನ್ನು ತಂದುಕೊಂಡಿಲ್ಲ.ಈ ಎಲ್ಲ ಸಾಹಸ ದೃಶ್ಯಗಳನ್ನು ಬಂಧಿಸಲು ಮೂರು ದುಬಾರಿ ಕ್ಯಾಮೆರಾಗಳನ್ನು ಸಹ ಬಳಸಲಾಗಿದೆ.

20 ದಿನಗಳ ಚಿತ್ರೀಕರಣಕ್ಕಾಗಿ ರೈಲ್ವೆ ಇಲಾಖೆಯ ಒಪ್ಪಿಗೆ ಪಡೆಯಲಾಗಿದ್ದು ಇದಕ್ಕಾಗಿ ರು.60 ಲಕ್ಷಗಳ ಶುಲ್ಕ ತೆರಲಾಗಿದೆ. ಹಾಗೆಯೇ ರೈಲ್ವೆ ಆಸ್ತಿಪಾಸ್ತಿ ಹಾಗೂ ಚಿತ್ರೀಕರಣದಲ್ಲಿ ಭಾಗವಹಿಸಿರುವ ಮಂದಿಗೆ ವಿಮೆಯನ್ನು ಮಾಡಿಸಲಾಗಿದೆ. ಭಾರಿ ಬಜೆಟ್ ನೊಂದಿಗೆ 'ಸರ್ಕಸ್' ಚಿತ್ರವನ್ನು ನಿರ್ಮಿಸುತ್ತಿದ್ದು 19.5 ಕೋಟಿ ರು.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಸರ್ಕಸ್ ಚಿತ್ರದಲ್ಲಿ ರೈಲಿನ ಸನ್ನಿವೇಶಗಳು ಶೇ.50ರಷ್ಟಿದ್ದು ಅದಕ್ಕೆ ಸಂಬಂಧಿಸಿದ 20 ದಿನಗಳ ಚಿತ್ರೀಕರಣ ಈಗಾಗಲೆ ಮುಗಿದಿದೆ. ಹಾಡುಗಳ ಚಿತ್ರೀಕರಣಕ್ಕಾಗಿ ಆಸ್ಟ್ರಿಯಾ ಹಾಗೂ ಜರ್ಮನಿ ದೇಶಗಳಿಗೆ ಅ.9ರಂದು ಸರ್ಕಸ್ ಚಿತ್ರತಂಡ ಹೊರಟಿತು. ಗಣೇಶ್ ಗೆ ಜೋಡಿಯಾಗಿ ಅರ್ಚನಾ ಗುಪ್ತಾ ನಟಿಸಿದ್ದಾರೆ. ದಯಾಳ್ ಪಿಕ್ಚರ್ಸ್ ಬ್ಯಾನರ್ ನಡಿ ದಯಾಳ್ ಪದ್ಮನಾಭ ನಿರ್ಮಿಸುತ್ತಿರುವ ಈ ಪ್ರೇಕ್ಷಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

(ದಟ್ಸ್ ಕನ್ನಡ ವಾರ್ತೆ)

ಮಸಾಲ ಚಿತ್ರಗಳ ನಿರ್ದೇಶಕ ಮತ್ತೆ ಬಂದ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada