twitter
    For Quick Alerts
    ALLOW NOTIFICATIONS  
    For Daily Alerts

    ನೀನೆ ನೀನೆ, ಗಂಗಾ ಕಾವೇರಿ ಚಿತ್ರಗಳ ಡಬ್ಬಿಂಗ್ ಪೂರ್ಣ

    By Staff
    |

    ಅದ್ವಿತ್ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಪಕ ಬಸವರೆಡ್ಡಿ ಅವರು ಮೊದಲ ಬಾರಿಗೆ ನಿರ್ಮಿಸುತ್ತಿರುವ 'ನೀನೆ ನೀನೆ' ನಟ ಶಿವಧ್ವಜ್ ನಿರ್ದೇಶನದ ಪ್ರಥಮ ಚಿತ್ರ. ಈ ಚಿತ್ರಕ್ಕೆ ನಗರದ ಆಕಾಶ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಡಬ್ಬಿಂಗ್ ಕಾರ್ಯ ಮುಕ್ತಾಯಗೊಂಡಿದೆ.

    ನಟನಾ ವೃತ್ತಿಯಿಂದ ನಿರ್ದೇಶಕನಾಗಿ ಬಡ್ತಿ ಹೊಂದಿರುವ ಶಿವಧ್ವಜ್ ಅವರ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ದಿನೇಶ್ ಬಾಬು ಛಾಯಾಗ್ರಹಣವಿದೆ. ದಿನೇಶ್ ಬಾಬು ತಮ್ಮ ಎಂದಿನ ಕೈಚಳಕವನ್ನು ಕ್ಯಾಮೆರಾ ಹಿಂದೆ ನಿಂತು ತೋರಿಸುತ್ತಾರೆ ಎಂಬ ಆಶಯ ಶಿವಧ್ವಜ್ ಗಿದೆ.

    ನೇರನುಡಿಯ ವ್ಯಕ್ತಿಯೊಬ್ಬ ತಾನು ಪ್ರೀತಿಸಿದಾಕೆಯನ್ನು ಅವರಪ್ಪನ ಅಪ್ಪಣೆ ಪಡೆದು ಮದುವೆಯಾದ ನಂತರ ಕೆಲಸದ ಒತ್ತಡ, ಸಾಕ್ಷಿ ಹಾಕಿದಕ್ಕೆ ಸ್ನೇಹಿತನಿಂದಾದ ಮೊಸ ಇಂತಹ ಹಲವು ಒತ್ತಡಗಳ ನಡುವೆ ಹೆಂಡತಿಯನ್ನು ಸಂತೋಷದಿಂದ ನೋಡಿಕೊಳ್ಳುವನೆ ಹಾಗೂ ಎದುರಾಗುವ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಾನೆ? ಎಂಬುದನ್ನು ತಿಳಿಯಬೇಕಾದರೆ 'ನೀನೆ ನೀನೆ' ಚಿತ್ರವನ್ನು ನೋಡಬೇಕು ಎನ್ನುತ್ತಾರೆ ನಿರ್ದೇಶಕರು.

    ಚಿತ್ರಕ್ಕೆ ಸ್ವಾರಸ್ಯ ಹಾಗೂ ಕುತೂಹಲ ಸನ್ನಿವೇಶಗಳನ್ನೊಳಗೊಂಡ ಕಥೆಯನ್ನು ರಚಿಸಿ ನಿರ್ದೇಶಿಸುತ್ತಿರುವವರು ಶಿವಧ್ವಜ್. ದಿನೇಶ್‌ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಂಜು ಮಾಂಡವ್ಯ ಸಂಭಾಷಣೆ, ನಾಗೇಂದ್ರ ಪ್ರಸಾದ್, ಕವಿರಾಜ್, ಹೃದಯಶಿವ ಗೀತರಚನೆ, ರಂಗಸ್ವಾಮಿ ನಿರ್ಮಾಣ ನಿರ್ವಹಣೆ, ಇಸ್ಮಾಯಿಲ್ ಕಲೆ, ಡಿಫ಼ರೆಂಟ್ ಡ್ಯಾನಿ ಸಾಹಸ, ರಾಮು, ಸಂಪತ್‌ರಾಜ್ ನೃತ್ಯ, ರಾಘವೇಂದ್ರ ಎಂ ನಾಯಕ್ ಸಹನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಧ್ಯಾನ್, ಐಶ್ವರ್ಯನಾಗ್, ಅನಂತನಾಗ್, ಶರಣ್, ದಿಲೀಪ್‌ರಾಜ್, ಶೈಲಜಾಜೋಷಿ, ರೇಖಾ, ಬೇಬಿ ಮಿಸ್ಟಿ, ಮೋಹನ್‌ಜುನೇಜಾ, ಗಣೇಶ್‌ರಾವ್, ಸ್ವಾಮಿ ಶ್ರೀನಗರ್, ಗೀತಾ, ವಾಣಿ, ಶಿವಮೂರ್ತಿ ಮುಂತಾದವರಿದ್ದಾರೆ.


    ಗಂಗಾ ಕಾವೇರಿ

    ಅನಗತ್ಯ ಕಾರಣಗಳಿಂದ ಎತ್ತೆತ್ತಲೋ ಹರಿದಿದ್ದ ಗಂಗಾ ಕಾವೇರಿ ನದಿ ಈಗ ಮತ್ತೆ ಸರಿ ಹಾದಿಯನ್ನು ಹಿಡಿದಿದೆ. ನಿರ್ಮಾಪಕ ಹಾಗೂ ನಿರ್ದೇಶಕರು ಅಂತೂ ಚಿತ್ರಕ್ಕೆ ಒಂದು ಗತಿ ಕಾಣಿಸುವ ನಿರ್ಧಾರಕ್ಕೆ ಬಂದಂತ್ತಿದೆ.

    ಅಕ್ಷಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ವಿ.ವೆಂಕಟಪ್ಪ ಅವರು ಅಪಾರ ವೆಚ್ಚದಲ್ಲಿ ನಿರ್ಮಿಸುತ್ತಿರುವ 'ಗಂಗಾ ಕಾವೇರಿ'ಗೆ ಪ್ರಸಾದ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ಪೂರ್ಣವಾಗಿದೆ.

    ಪುಣ್ಯನದಿಗಳು ಉಗಮಿಸಿರುವ, ಅನೇಕ ದೇವತೆಗಳ ನೆಲೆವೀಡಾಗಿರುವ, ಧರೆಯ ಸ್ವರ್ಗವೆನಿಸಿರುವ ಹಿಮಾಲಯದಲ್ಲಿ ಆರಂಭವಾಗಿ ತಲಕಾವೇರಿ, ಮಡಿಕೇರಿ, ಕುಲುಮನಾಲಿ, ಬ್ಯಾಂಕಾಕ್ ಹಾಗೂ ಬೆಂಗಳೂರು ಸೇರಿದಂತೆ ಹಲವೆಡೆ 45ದಿವಸಗಳ ಚಿತ್ರೀಕರಣ ನಡೆದಿರುವ ಈ ಚಿತ್ರಕ್ಕೆ ವಿಷ್ಣುಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಮೇಲ್ಕಂಡ ಪ್ರಾಕೃತಿಕ ಸ್ಥಳಗಳ ಶ್ರೀಮಂತಿಕೆಯನ್ನು ಛಾಯಾಗ್ರಾಹಕ ವೇಣು ಕ್ಯಾಮೆರಾದಲ್ಲಿ ತುಂಬಿಸಿದ್ದಾರೆ. ಕೆ.ಕಲ್ಯಾಣ್ ಮಾಧುರ್ಯ ತುಂಬಿದ ಗೀತೆಗಳನ್ನು ರಚಿಸಿರುವುದಲ್ಲದೇ ಸಂಗೀತವನ್ನು ಸಂಯೋಜಿಸಿದ್ದಾರೆ. ಉಳಿದಂತೆ ಬಿ.ಎ.ಮಧು ಸಂಭಾಷಣೆ, ಫೈವ್‌ಸ್ಟಾರ್ ಗಣೇಶ್ ನೃತ್ಯ, ಕೌರವ ವೆಂಕಟೇಶ್ ಸಾಹಸ, ಕೃಷ್ಣಾಚಾರ್ ಕಲೆ, ಪುರುಷೋತ್ತಮ್ ಸಹನಿರ್ದೇಶನ, ರಂಗಸ್ವಾಮಿ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಅಕ್ಷಯ್, ಮಲ್ಲಿಕಾ ಕಪೂರ್. ಮಾಯಿ, ಅನಂತನಾಗ್, ರೂಪಾದೇವಿ, ತಾರಾ, ಶರಣ್, ಚಿತ್ರಾಶೆಣೈ, ರಮೇಶ್‌ಭಟ್ ಅವರಲ್ಲದೇ ಪತ್ರಕರ್ತರಾದ ಗಣೇಶ್‌ಕಾಸರಗೋಡು ಹಾಗೂ ಬಿ.ಗಣಪತಿ ಇದ್ದಾರೆ.

    (ದಟ್ಸ್‌ಕನ್ನಡ ಸಿನಿವಾರ್ತೆ)

    Friday, April 26, 2024, 6:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X