»   » ಕ್ಲೈಮ್ಯಾಕ್ಸ್ ಮುಗಿಸಿದ ಶಿವಣ್ಣನ ನಂದ ಚಿತ್ರ

ಕ್ಲೈಮ್ಯಾಕ್ಸ್ ಮುಗಿಸಿದ ಶಿವಣ್ಣನ ನಂದ ಚಿತ್ರ

Subscribe to Filmibeat Kannada

ಎಲ್ಲಾ ಚಿತ್ರಗಳಲ್ಲೂ ಕ್ಲೈಮ್ಯಾಕ್ಸ್‌ಗೆ ವಿಶೇಷ ಸ್ಥಾನ. ಸಿನೆಮಾಸಕ್ತರ ಬಾಯಲ್ಲಿ ಸಾಮಾನ್ಯವಾಗಿ ಕ್ಲೈಮ್ಯಾಕ್ಸ್ ಹೇಗಿದೆ ಎಂಬ ಮಾತು ಕೇಳಿ ಬರುವುದು ವಾಡಿಕೆ. ಸಾಕಷ್ಟು ನಿರ್ಮಾಪಕರು ಅಂತಿಮ ಸನ್ನಿವೇಶ ಅದ್ದೂರಿಯಾಗಿರಬೇಕೆಂದು ಹಂಬಲ ಪಟ್ಟು ಅಧಿಕ ವ್ಯಯ ಮಾಡುತ್ತಾರೆ.

ಕೆ.ಕೆ.ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ನಂದ' ಚಿತ್ರಕ್ಕೆ ಇತ್ತೀಚೆಗೆ ಭರ್ಜರಿ ಕ್ಲೈಮ್ಯಾಕ್ಸ್ ಸನ್ನಿವೇಶನ್ನು ಚಿತ್ರೀಕರಿಸಿಕೊಂಡಿದ್ದಾರೆ ನಿರ್ದೇಶಕ ಅನಂತರಾಜು. ಬಿ.ಡಿ.ಎ ಆವರಣ ಹಾಗೂ ನೈಸ್‌ರಸ್ತೆಗಳಲ್ಲಿ ಆಯೋಜಿಸಲಾಗಿದ ಈ ಸನ್ನಿವೇಶದಲ್ಲಿ ಅಂಬಾಸಿಡರ್, ಟಾಟಾಸಿಯಾರ, ಟಾಟಾಸುಮೊ, ಟಾಟಾಸಫಾರಿ, ಸ್ಕಾರ್ಪಿಯೊ ವಾಹನಗಳನ್ನು ಬಳಸಿಕೊಂಡಿದ್ದು ಆ ವಾಹನಗಳಲ್ಲಿ ಕೆಲವು ಜಖಂ ಆದರೆ ಕೆಲವು ಅಗ್ನಿಗಾಹುತಿಯಾಗಿದೆ. ಈ ಮಾರಾಮಾರಿಯ ಸನ್ನಿವೇಶದಲ್ಲಿ ಶಿವರಾಜಕುಮಾರ್, ಸಂಧ್ಯಾ, ಶರಣ್, ಶರತ್‌ಲೋಹಿತಾಶ್ವ, ರಂಗಾಯಣರಘು ಹಾಗೂ ಸಾಕಷ್ಟು ಸಹಕಲಾವಿದರು ಪಾಲ್ಗೊಂಡಿದ್ದರು.

ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್ ನಂದನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಕಾದಲ್ ಸಿನೆಮಾ ಖ್ಯಾತಿಯ ಸಂಧ್ಯಾ ನಾಯಕಿಯಾಗಿದ್ದಾರೆ. ಅನಂತರಾಜು ಪ್ರಥಮವಾಗಿ ನಿರ್ದೇಶಿಸಿರುವ ನಂದನನ್ನು ಮಾಹಿನ್ ಅವರು ನಿರ್ಮಿಸಿದ್ದಾರೆ. ನಿರ್ಮಾಪಕರ ನಿಜಜೀವನದಲ್ಲಿ ನಡೆದ ಕತೆಗೆ ನಿರ್ದೇಶಕರು ಚಿತ್ರಕತೆ ಬರೆದಿದ್ದಾರೆ. ರಮೇಶ್‌ಬಾಬು ಛಾಯಾಗ್ರಹಣ, ವಿ.ಮನೋಹರ್ ಸಂಗೀತ, ಎಸ್.ಮನೋಹರ್ ಸಂಕಲನ, ಪಳನಿರಾಜ್ ಸಾಹಸ, ಇಸ್ಮಾಯಿಲ್ ಕಲೆ, ರಾಮು, ಗಂಡಸಿನಾಗರಾಜ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಸಂಧ್ಯಾ, ಮೈತ್ರೇಯಿ, ರಂಗಾಯಣರಘು, ಮಿಥುನ್‌ತೇಜಸ್ವಿ, ಮಾಹಿನ್, ಕಿಶೋರ್, ಶರತ್‌ಲೋಹಿತಾಶ್ವ, ವನಿತಾವಾಸು, ಭವ್ಯ, ಮುನಿ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಸಿನಿವಾರ್ತೆ)

ಮನೋಹರ್ ಸಂಗೀತದಲ್ಲಿ ಮತ್ತೆ ಶಿವಣ್ಣನ ಚಿತ್ರ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada