»   » ವಿದೇಶದಲ್ಲಿ ನಾಲ್ವರು ನಾಯಕರ ಮಸ್ತ್ ಮಜಾ ಮಾಡಿ

ವಿದೇಶದಲ್ಲಿ ನಾಲ್ವರು ನಾಯಕರ ಮಸ್ತ್ ಮಜಾ ಮಾಡಿ

Posted By:
Subscribe to Filmibeat Kannada

ಸೌಂದರ್ಯ ನಮನ ಕ್ರಿಯೇಷನ್ಸ್ ಅವರ ಚೊಚ್ಚಲ ಕಾಣಿಕೆ ಮಸ್ತ್ ಮಜಾ ಮಾಡಿ ಚಿತ್ರದ ಎರಡು ಗೀತೆಗಳು ವಿದೇಶದಲ್ಲಿ ಚಿತ್ರೀಕೃತವಾಗುತ್ತಿದೆ. ಇದು ಸುದೀಪ್, ವಿಜಯರಾಘವೇಂದ್ರ, ದಿಗಂತ್, ನಾಗಕಿರಣ್ ಹಾಗೂ ಕೋಮಲ್ ಅಭಿನಯಿಸುತ್ತಿರುವ ಪಂಚನಾಯಕರ ಚಿತ್ರ. ಈ ಪಂಚನಾಯಕರಿಗೆ ಏಕ ನಾಯಕಿಯಾಗಿ ಜೆನ್ನಿಫ಼ರ್ ಕೊತ್ವಾಲ್ ನಟಿಸುತ್ತಿದ್ದಾರೆ.

ಸುದೀಪ್ ಅವರನ್ನು ಹೊರತು ಪಡಿಸಿ ಉಳಿದ ನಾಲ್ವರು ನಾಯಕರು ಜೆನ್ನಿಫ಼ರ್ ಅವರೊಂದಿಗೆ ಹಾಡಿಕುಣಿಯಲು ವಿದೇಶಕ್ಕೆ ತೆರೆಳಿದ್ದಾರೆ. ಸಾಹಿತಿ ರಾಂನಾರಾಯಣ್ ರಚಿಸಿರುವ 'ಇದು ಝಣ ಝಣ ಕಾಂಚಾಣ...ಮಿನಮಿನ ಮಿಂಚೋಣ...' ಮತ್ತು 'ಚೋರಿ ಚೋರಿ ನಿನ್ನ ಎಂದೋ ಮೆಚ್ಚಿಕೊಂಡೆ....ಕಣ್ಣಿನಲ್ಲಿ ಕೊಚ್ಚಿಕೊಚ್ಚಿ ಕೊಂದೆ...ಪ್ಯಾರಿ ಪ್ಯಾರಿ ನಿನ್ನೆ ಹಚ್ಚಿಕೊಂಡೆ ' ಎಂಬ ಗೀತೆಗಳು ತ್ರಿಭುವನ್ ನೃತ್ಯ ಸಂಯೋಜನೆಯಲ್ಲಿ ಚಿತ್ರೀಕೃತವಾಗಿದೆ.

ಪ್ರಸ್ತುತ ನಂದ ಚಿತ್ರವನ್ನು ನಿರ್ದೇಶಿಸುತ್ತಿರುವ ಅನಂತರಾಜು ಈ ಚಿತ್ರದ ನಿರ್ದೇಶಕರು. ಸೌಂದರ್ಯ ನಮನ ಕ್ರಿಯೇಷನ್ಸ್ ತಂಡ ಚಿತ್ರಕ್ಕೆ ಕತೆ ರಚಿಸಿದೆ ಎಂದು ನಿರ್ಮಾಪಕ ಜಗದೀಶ್ ತಿಳಿಸಿದ್ದಾರೆ. ಕವಿರಾಜ್, ರಾಂನಾರಾಯಣ್ ಹಾಗೂ ಶ್ಯಾಂ ಬರೆದಿರುವ ಗೀತೆಗಳಿಗೆ ಬಾಲಾಜಿ ಸಂಗೀತ ಸಂಯೋಜಿಸಿದ್ದಾರೆ. ಎಂ.ಆರ್.ಸೀನು ಛಾಯಾಗ್ರಹಣ, ರವಿವರ್ಮ ಸಾಹಸ, ರಾಮು, ಪಾಪಣ್ಣ ನಿರ್ಮಾಣನಿರ್ವಹಣೆಯಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ರಂಗಾಯಣರಘು, ಸಿಹಿಕಹಿಚಂದ್ರು, ಮುಂತಾದವರಿದ್ದಾರೆ.

(ದಟ್ಸ್ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada