For Quick Alerts
  ALLOW NOTIFICATIONS  
  For Daily Alerts

  ರಾಜ್‌ ಎಂದರೆ ಏನು?- ಒಂದು ಅವಲೋಕನ

  By Staff
  |

  *ಎಸ್‌.ಜಗನ್ನಾಥರಾವ್‌ ಬಹುಳೆ, ಆನೇಕಲ್‌

  ಏಪ್ರಿಲ್‌ 24, ಕನ್ನಡ ಜನತೆ ಮರೆಯಲು ಸಾಧ್ಯವೇ ಇಲ್ಲದ ದಿನ. ಇಂದು ಕನ್ನಡದ ಮೇರುನಟ ಕರ್ನಾಟಕ ರತ್ನ ಡಾ.ರಾಜ್‌ಕುಮಾರ್‌ ಜನ್ಮದಿನ. ಅಭಿಮಾನ-ಒಲವು-ನಿರೀಕ್ಷೆ ... ಹೀಗೆ ರಾಜ್‌ ಜನಸಾಮಾನ್ಯರ ಬದುಕಿನ ಒಂದು ವಿಶಿಷ್ಟ ವ್ಯಕ್ತಿಯಾಗಿ ಆವರಿಸಿಕೊಂಡುಬಿಟ್ಟಿದ್ದಾರೆ.

  ‘ಕನ್ನಡಿಗರು ಬಡತನ, ಜಾತಿ, ಪಂಗಡಗಳನ್ನು ಮರೆತು ರಾಜ್‌ಕುಮಾರ್‌ರನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ದೇವರಲ್ಲಿ ಭಕ್ತಿ , ಗುರುಹಿರಿಯರ ಬಗ್ಗೆ ಗೌರವ, ಕಲಾರಾಧನೆ, ಪರಂಪರೆ ಇತ್ಯಾದಿಗಳನ್ನು ಹೇಳುವ ರಾಜ್‌ ಚಿತ್ರಗಳು ಸಮಯ ಸಾಧಕತನವನ್ನಾಗಲೀ, ನೀಚ ಹಣದಾಸೆಯನ್ನಾಗಲೀ ಎಂದೂ ಹೇಳುವುದಿಲ್ಲ’ ಎನ್ನುವ ಲಂಕೇಶ್‌ ಅವರ ಮಾತುಗಳು ಇಲ್ಲಿ ಸ್ಮರಿಸಲರ್ಹವಾದವುಗಳು.

  ರಾಜ್‌ ಚಿತ್ರಗಳನ್ನು ನೋಡುತ್ತಾ ಬಂದ ಸುಮಾರು ನಾಲ್ಕು ತಲೆಮಾರುಗಳ ನಾಗರಿಕ ಸಮುದಾಯ ನಮ್ಮಲ್ಲಿದೆ. ರಾಜ್‌ ಚಿತ್ರಗಳ ಯಶಸ್ಸಿನೊಂದಿಗೆ ಮೇಲ್ಕಂಡ ಮಾತುಗಳನ್ನು ತುಲನೆ ಮಾಡಿದಾಗ ನ್ಸಿಸಂಶಯವಾಗಿಯೂ ನಾಗರಿಕತೆಯನ್ನು ಅಡಿಪಾಯದಿಂದಲೇ ಗಟ್ಟಿಗೊಳಿಸಿ ರಾಜ್‌ ಚಿತ್ರಗಳ ನಿರ್ಣಾಯಕ ಪಾತ್ರ ಇಲ್ಲಿ ಮಹತ್ವ ಪಡೆದುಕೊಳ್ಳುತ್ತದೆ.

  ‘ಮೌಲ್ಯಗಳೇ ಮೌಲ್ಯ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ರಾಜ್‌ಕುಮಾರ್‌ ಅವರನ್ನು ದೂರದಿಂದ ಬಲ್ಲವರಿಗೂ ಗೊತ್ತಾಗುವುದೇನೆಂದರೆ, ಅವರಿಗೆ ಜೀವನದ ಉನ್ನತ ಮೌಲ್ಯಗಳ ಬಗ್ಗೆ ನಿಷ್ಠೆ, ಆದರ್ಶಗಳಿವೆ, ಉದಾತ್ತ ಧ್ಯೇಯಗಳಿವೆ...’ ಎನ್ನುವ ಹಿರಿಯ ಲೇಖಕಿ ಡಾ.ವೀಣಾ ಶಾಂತೇಶ್ವರ ಅವರ ಈ ನುಡಿಗಳು ಬಹುಶಃ ಉಚ್ಛ ಶಿಕ್ಷಣ ಮತ್ತು ಸೌಲಭ್ಯಗಳಿಂದಲೇ ವ್ಯಕ್ತಿ ಸುಸಂಸ್ಕೃತನಾಗುತ್ತಾನೆಂಬ ಭಾವನೆಗೆ ಸಡ್ಡು ಹೊಡೆಯುತ್ತದೆ. ವ್ಯಕ್ತಿತ್ವ ರೂಪಿಕೆಗೆ ರಾಜ್‌ ಸ್ವಯಂ ತಮ್ಮನ್ನು ತೆರೆದುಕೊಂಡ ನಿರಾಳವಾದ ಬಗೆಯನ್ನು ವಿಶದಪಡಿಸುತ್ತವೆ. ರಾಜ್‌ ಅವರದು ವಿಚಾರಶೀಲ, ಪರಿಪಕ್ವಗೊಂಡ ವ್ಯಕ್ತಿತ್ವ ಎನ್ನುವುದರಲ್ಲಿ ಸಂದೇಹವಿಲ್ಲ .

  ರಾಜ್‌ಕುಮಾರ್‌ ಮಲ್ಲಿಗೆಯ ಬಳ್ಳಿಯನ್ನು ನೋಡಿ ಅದರ ಸುವಾಸನೆಯನ್ನು ತಮ್ಮ ಸ್ಮರಣೆಯಲ್ಲಿರುವ ದ್ವಿಪದಿಯ ಮೂಲಕ ವರ್ಣಿಸುತ್ತಾರೆ. ಬಡೆ ಗುಲಾಂ ಆಲಿ ವಾದನ ಕೇಳುತ್ತಾ ಮೈಮರೆಯುತ್ತಾರೆ. ಸುಬ್ಬಯ್ಯ ನಾಯ್ಡು, ಗುಬ್ಬಿ ವೀರಣ್ಣ ನಾಟಕಗಳಲ್ಲಿ ಮತ್ತು ಆರಂಭದ ಕಬೀರ್‌ ಮತ್ತು ಸಂತ ತುಕಾರಾಂ ಚಿತ್ರದಲ್ಲಿ ರಾಜ್‌ ತಾವು ವಹಿಸಿದ ಪಾತ್ರಾಭಿನಯದಿಂದ, ಅವರು ಬೋಧಿಸಿದ ಆದರ್ಶಗಳತ್ತ ಒಳನೋಟ ಹರಿಸಲು ಬಳಸಿಕೊಂಡರು. ಇದು ರಾಜ್‌ ಗಳಿಸಿದ ಶಿಕ್ಷಣ. ಇಂತಹ ನಟಯೋಗಿಗೆ ಆಧ್ಯಾತ್ಮಿಕ ವಿಚಾರಶಕ್ತಿ ಸಹಜವಾಗಿ ಒಲಿದಿದೆ.

  ರಾಜ್‌ರ ಬದುಕಿನ ನಿರಂತರ ಕಲಿಕೆಯ ಮತ್ತು ಸಮರ್ಪಣೆಯ ಆಶಯಗಳು ಅವರ ಹಾದಿಯ ಚುಕ್ಕಾಣಿಯಾಗಿವೆ. ಆತ್ಮಾಭಿಮಾನ ಸ್ಫುರಿಸುವ ಅವರ ಅಪ್ಪಟ ಕನ್ನಡ ನಿಷ್ಠೆ ಅನನ್ಯ.

  ವರ್ಗಭೇದ ಮರೆತು ಇಡೀ ಸಮುದಾಯ ಪ್ರತಿವರ್ಷ ರಾಜ್‌ ಹುಟ್ಟುಹಬ್ಬದ ಸಡಗರವನ್ನು ಹಂಚಿಕೊಳ್ಳುವ ಏಪ್ರಿಲ್‌ 24ರ ದಿನದ ಈ ಅವಲೋಕನ, ವಿಶಾಲ ಸಾಗರದ ಕೆಲ ಹನಿಗಳಷ್ಟೆ .

  (ವಿಜಯ ಕರ್ನಾಟಕ)

  Post your views

  ನೆನಪು-ಕನಸುಗಳ ನಡುವೆ ನಾಡೋಜನ 75ನೇ ಹುಟ್ಟುಹಬ್ಬ
  ವರನಟ ಡಾ. ರಾಜಕುಮಾರ್‌ ಚಿತ್ರಾವಳಿ

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X