For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಚಿತ್ರಾನ್ನ!

  By Staff
  |

  ಮದನ ಬಂದಷ್ಟೇ ವೇಗವಾಗಿ ಮನೆಗೆ ಮರಳಿದ! ಜೈಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ದಂಪತಿಗಳ ಜೇಬು ಖಾಲಿ ಮಾಡಿದ. ಈ ಜೋಡಿಯ ಮುಂದಿನ ನಿರೀಕ್ಷೆ ಈ ಬಂಧನ.

  ವಿಷ್ಣುವರ್ಧನ್, ಜಯಪ್ರದಾ ಜೋಡಿಯ ಈ ಬಂಧನದ ಚಿತ್ರಕತೆ ಮತ್ತು ನಿರ್ದೇಶನದ ಹೊಣೆಯನ್ನು ವಿಜಯಲಕ್ಷ್ಮಿ ಸಿಂಗ್ ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದಾರೆ. ಮದನ ಚಿತ್ರವನ್ನು ನಿರ್ದೇಶಿಸಿ ಪತಿದೇವರು(ಜೈ ಜಗದೀಶ್ ) ಸೋತರು. ನಾನಾದರೂ ಗೆಲ್ಲೋಣ ಅನ್ನೋ ಬಯಕೆ ಅವರದು. ಮನೋಮೂರ್ತಿ ಸಂಗೀತ ಚಿತ್ರಕ್ಕಿದೆ.

  ***

  ಸದ್ಯದ ವೇಗ ನೋಡಿದರೆ ಮಾತಾಡ್ ಮಾತಾಡು ಮಲ್ಲಿಗೆ, ಇತ್ತೀಚಿನ ಮುಂಗಾರು ಮಳೆ ದಾಖಲೆಗಳನ್ನು ಮುರಿಯುವಂತೆ ಕಾಣುತ್ತಿದೆ. ಚಿತ್ರದ ಹಾಡು, ಕತೆ, ಪಾತ್ರಗಳು ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿವೆ. ಈಗಾಗಲೇ ನಿರ್ದೇಶಕ ನಾಗತಿ ಹಳ್ಳಿ ಮುಖ ಹುಣ್ಣಿಮೆ ಚಂದ್ರನಂತೆ ಹೊಳೆಯುತ್ತಿದೆ!

  ***

  ಸಿಕ್ಸರ್ ನಂತರ ನಿರ್ದೇಶಕ ಶಶಾಂಕ್ ಅವರ ಮೊಗ್ಗಿನ ಜಡೆ ಚಿತ್ರೀಕರಣ ಭರದಿಂದ ಸಾಗಿದೆ. ಮುಂಗಾರು ಮಳೆ ನಿರ್ಮಾಪಕ ಇ.ಕೃಷ್ಣಪ್ಪ ಹಣ ಸುರಿದಿದ್ದಾರೆ. ಚಿತ್ರದ ತುಂಬ ಹೊಸ ಮುಖಗಳೇ..

  ***

  ಇದು ಕತೆಯಲ್ಲ ಕೆತ್ತನೆ ಎಂಬ ಉಪಶೀರ್ಷಿಕೆಯಡಿ ನೀನೊಲಿದ ಕ್ಷಣಚಿತ್ರ ತಯಾರಾಗುತ್ತಿದೆ.

  ***

  ತೊಟ್ಟಿಲು ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆಯಂತೆ. ಕತೆ, ಚಿತ್ರಕತೆ, ನಿರ್ದೇಶನ ಕೆ.ಪ್ರಸನ್ನ ಕುಮಾರ್ ಅವರದು. ಜೋಗಿ ಖ್ಯಾತಿಯ ಮಳವಳ್ಳಿ ಸಾಯಿಕೃಷ್ಣ ಚಿತ್ರಕ್ಕೆ ಸಂಭಾಷಣೆ ನೀಡಲಿದ್ದಾರೆ. ತೊಟ್ಟಿಲಲ್ಲಿ ಮಲಗಿದ ಮಗು ಪಕ್ಕ ಮಚ್ಚು ಇಟ್ಟಿರುವ ಚಿತ್ರ ಜಾಹೀರಾತಿನಲ್ಲಿ ಕಾಣಿಸಿದೆ.

  ***

  ಜನ್ಮ ಅನ್ನೋ ಚಿತ್ರದ ಹಾಡುಗಳ ಧ್ವನಿ ಮುದ್ರಣ ಆರಂಭಗೊಂಡಿದೆ. ಆದಿಯೂ ಅಂತ್ಯವೂ ಇಲ್ಲದವನು ಈಶ್ವರ.. ಪ್ರೀತಿ ಮಾಡದವನು ಇಲ್ಲಿ ನಶ್ವರ ಎಂದು ಜಾಹೀರಾತು ಹೇಳುತ್ತಿದೆ.

  ***

  ನಾನು ನೀನು ಜೋಡಿ ಕ್ಯಾಸೆಟ್ ಬಿಡುಗಡೆ ಸದ್ಯದಲ್ಲೇ ಆಗಲಿದೆ. ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿದ್ದಾರೆ. ಹಂಸಲೇಖ ಹಾಡು, ನಂಜುಂಡೇ ಗೌಡರ ದುಡ್ಡು ಜೋಡಿಯಾಗಿದೆ. ಫಲಿತಾಂಶ ನೋಡೋಣ.

  ***

  ಉಪೇಂದ್ರ ಮತ್ತು ದರ್ಶನ್ ಅಭಿನಯದ ಅನಾಥರು ಸೆಪ್ಟೆಂಬರ್ 18 ರಂದು ತೆರೆಕಾಣಲಿದೆ.

  ***

  ಸತ್ಯ ಇನ್ ಲವ್ಸಂಕ್ರಾಂತಿಗೆ ಬರಲಿದೆ. ದಸರಾ ಹಬ್ಬಕ್ಕೆ ಧ್ವನಿ ಸುರಳಿ ಬರುತ್ತದೆ ಎನ್ನುತ್ತಾರೆ ನಿರ್ದೇಶಕ ರಾಘವ್ ಲೋಕಿ.

  ***

  ಗಂಗೆ ಬಾರೇ ತುಂಗೆ ಬಾರೆಚಿತ್ರೀಕರಣ ಭರದಿಂದ ಸಾಗಿದೆ. ಕೋಕಿಲಾ ಸಾಧು ನಿರ್ದೇಶನ ಮಾಡಿದ್ದು, ದೇವರಾಜ್ ಪುತ್ರ ಪ್ರಜ್ವಲ್ ಚಿತ್ರದ ನಾಯಕ.

  ***

  ಇದು ಬದುಕಿನ ಕತೆ ಮಚ್ಚು ಬಂದೂಕಿನ ಜೊತೆ. ಬಲ್ಲಿಯೋ ಬಲಿಯೋ ಗೊತ್ತಿಲ್ಲ. ಈ ಭೂಗತ ಲೋಕದ ಖದರೇ ಹೀಗೆ.. ಇಲ್ಲಿ ಬಲರಾಮ ಬಲ್ಲಿಯಾಗ್ತಾನೆ... ಎನ್ನುತ್ತಿದೆ ಬಲ್ಲಿಚಿತ್ರದ ಜಾಹೀರಾತು

  . ***

  ಜೊತೆಜೊತೆಯಲಿಚಿತ್ರದ ಜನಪ್ರಿಯ ಹಾಡು ; ಓ ಗುಣವಂತ. ಈ ಹಾಡೇ ಪ್ರೇಮ್ ಅವರ ಹೊಸ ಚಿತ್ರದ ಶೀರ್ಷಿಕೆ. ಸದ್ದು ಗದ್ದಲವಿಲ್ಲದೇ ಚಿತ್ರೀಕರಣ ಮುಗಿಸಿರುವುದಾಗಿ ಚಿತ್ರತಂಡ ಹೇಳಿದೆ.

  ಕತೆ, ಚಿತ್ರಕತೆ, ನಿರ್ದೇಶನದ ಹೊಣೆ ಹೊತ್ತಿರುವವರು ರಘುವರ್ಧನ್. ಹಂಸಲೇಖ ಸಂಗೀತ ನೀಡಿದ್ದಾರೆ. ಪ್ರೇಮ್, ರೇಖಾ, ಅವಿನಾಶ್, ರಂಗಾಯಣ ರಘು, ಚಿತ್ರಾ ಶೆಣೈ ಪ್ರಮುಖ ಪಾತ್ರದಲ್ಲಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X