»   » ‘ರಾಕ್‌’ ಕೂಡ ಬಿರುಕು ಬಿಟ್ಟಿತೇ?

‘ರಾಕ್‌’ ಕೂಡ ಬಿರುಕು ಬಿಟ್ಟಿತೇ?

Subscribe to Filmibeat Kannada

*ವಿಘ್ನೕಶ್ವರ ಕುಂದಾಪುರ

ಒಂದು ಸಿನಿಮಾ ತೋಪಾದಾಗ, ಗುಂಡು ಹಾಕಿಸುವವರನ್ನು ನೀವು ನೋಡಿದ್ದೀರಾ? ರಾಕ್‌ಲೈನ್‌ ಅಂಥಾ ಅಪರೂಪದವರಲ್ಲೊಬ್ಬರು. ಅವರು ನಿಜವಾಗಿ ಧೀರರೇ ಸರಿ.

ಆವತ್ತು ರಾಕ್‌ಲೈನ್‌ ಕೊಟ್ಟ ಗುಂಡು ಪಾರ್ಟಿಯಲ್ಲಿ ಸುಖಾಸುಮ್ಮನೆ ಕುಡಿಯುತ್ತಿದ್ದ ಅನೇಕರು ಒಂದು ಸುತ್ತು ಮತ್ತು ಬಂದು, ಅತ್ತಿತ್ತಾಗಿ ಚಿತ್ತಾಗ ತೊಡಗಿದ ನಂತರವೇ ಈ ಪಾರ್ಟಿ ಯಾಕೆ ಅಂತ ಚಿಂತಿಸಿದ್ದು. ಆಧುನಿಕ ಮಾನವ ಹೀಗೇ ಅಲ್ಲವೇ- ಸಂತೋಷ, ದುಃಖ, ವಿರಸ, ವಿರಹ, ವಿಷಾದ, ಗೆಲುವು, ಸೋಲು ಎಲ್ಲ ಸಂದರ್ಭದಲ್ಲೂ ‘ಗುಂಡಣ್ಣ’ನಾಗಬಯಸುತ್ತಾನೆ. ರಾಕ್‌ಲೈನ್‌ ಧೀರರಾದ್ದರಿಂದ ಹಂಚಿಕೊಂಡು ಕುಡಿ ಎಂಬಂಥ ಜಾಯಮಾನದವರು.

ಸೋಲು- ಗೆಲುವಿನ ಹಾದಿಯಲ್ಲಿ ಲಕ್ಷ್ಮಿಪುತ್ರ ರಾಕ್‌ಲೈನ್‌ ದೊಡ್ಡ ರಿಸ್ಕುಗಳಿಗೂ ಕೈಹಾಕಿದವರು. ಯಾವುದೋ ಒಂದು ಗೆಲುವಿನ ಬಲು ನಿರೀಕ್ಷೆಯ ಎಳೆ ಇಟ್ಟುಕೊಂಡೇ ಅವರು ಸಿನಿಮಾಗಳಿಗೆ ಕಾಸು ಹಾಕುತ್ತಾರೆ. ‘ಪ್ರೀತ್ಸೋದ್‌ ತಪ್ಪಾ’ ಗೆದ್ದಿದ್ದರ ಸ್ಮರಣೆ ‘ಒಂದಾಗೋಣ ಬಾ’ ಚಿತ್ರಕ್ಕೆ ಪ್ರೇರಣೆ. ಕೊಂಡಿ ಕಳಚಿಕೊಂಡಿದ್ದ ರವಿಚಂದ್ರನ್‌ ಹಾಗೂ ಹಂಸಲೇಖ ನಡುವೆ ತೇಪೆ ಹಾಕಿದ ರಾಕ್‌ಲೈನ್‌ ಕೊನೆಗೆ ಚಿತ್ರ ತೋಪಾದಾಗ ಹ್ಯಾಪು !

‘ಒಂದಾಗೋಣ ಬಾ’ ಮೊದಲ ವಾರ ಜೋರು. ಎರಡನೇ ವಾರ ಸುಮಾರು. ಮೂರನೇ ವಾರ ಢಮಾರು- ಇದು ಖುದ್ದು ರಾಕ್‌ಲೈನ್‌ ಕೊಟ್ಟ ರಿಪೋರ್ಟು. ಮುಂಬಯಿ ಕರ್ನಾಟಕದಲ್ಲಿ ಹಾಗೂ ಹೀಗೂ ಶಿಲ್ಪ ಶೆಟ್ಟಿ ಸೊಂಟ ಇನ್ನೂ ಪ್ರೇಕ್ಷಕರನ್ನು ಕರೆಯುತ್ತಿದೆ ಅನ್ನುವ ಸಣ್ಣ ಸೆಳಕಿನ ಸಂಗತಿ ಬಿಟ್ಟರೆ ರಾಕ್‌ಗೆ ಹೇಳೋಕೆ ಅಂಥಾ ವಿಷಯಗಳೇ ಆವತ್ತು ಇರಲಿಲ್ಲ. ತಮ್ಮ ಕಷ್ಟ ಹಂಚಿಕೊಳ್ಳೋಕೆ ರವಿಚಂದ್ರನ್‌ ಕೂಡ ಬಂದಿರಲಿಲ್ಲ. ಅದು ಹೇಳಿಕೊಳ್ಳದೆಯೂ ಬಿಚ್ಚಿಕೊಂಡ ಇನ್ನೊಂದು ದುಃಖ.

ಇಪ್ಪತ್ತೇಳು ಸಿನಿಮಾಗಳ ಏಳು- ಬೀಳುಗಳ ಸೀಳು ರಾಕ್‌ಲೈನ್‌ಗೆ ಇಣುಕತೊಡಗಿ ಮೊಗದಲ್ಲಿ ಎಂಥದೋ ಗಾಢ ವಿಷಾದ. ಗಾಂಧಿನಗರ ಜಂಜಡದಿಂದ ;?

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada